ಶುಕ್ರವಾರ, ನವೆಂಬರ್ 27, 2020
19 °C

ಕಬ್ಬಿನ ಗದ್ದೆಯಲ್ಲಿ 3 ಚಿರತೆ ಮರಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ತಾಲ್ಲೂಕಿನ ಬಿ.ಹೊಸೂರು ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಶನಿವಾರ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದ ಕುಮಾರ್‌ ಎಂಬುವರು ತಮ್ಮ ಕಬ್ಬಿನ ಗದ್ದೆಗೆ ತೆರಳಿದ ಸಂದರ್ಭದಲ್ಲಿ ಮರಿಗಳ ಚೀರಾಟ ಕೇಳಿಸಿದೆ. ಗದ್ದೆಯ ಒಳಗೆ ಹೋಗಿ ನೋಡಿದಾಗ ಚಿರತೆ ಮರಿಗಳು ಪತ್ತೆಯಾಗಿದೆ. ತಾಯಿ ಚಿರತೆ ಹತ್ತಿರದಲ್ಲೇ ಇರುವ ಸಾಧ್ಯತೆ ಇದ್ದು, ಅದನ್ನು ಕೂಡಲೇ ಸೆರೆ ಹಿಡಿದು ಕಾಡಿಗೆ ಬಿಡಬೇಕು ರೈತರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಚಿರತೆ ಮರಿಗಳನ್ನು ವೀಕ್ಷಿಸಲು ಜನರು ಸೇರಿದ್ದರು. ಕೆಲವರು ಚಿರತೆ ಮರಿಗಳ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿಗಳನ್ನು ವಶಕ್ಕೆ ಪಡೆದರು. ತಾಯಿ ಚಿರತೆಯನ್ನು ಶೀಘ್ರದಲ್ಲಿ ಸೆರೆಹಿಡಿಯಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು