ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದ ಮನೆಗೆ ನುಗ್ಗಿ ಮೇಕೆ ಮತ್ತು ಮಾಲೀಕನ ಮೇಲೆ ದಾಳಿ ನಡೆಸಿದ್ದ ಚಿರತೆ ಸರೆ

Last Updated 9 ಫೆಬ್ರುವರಿ 2023, 10:57 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಗೆ ನುಗ್ಗಿದ್ದ ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿದ್ದಾರೆ.

ಗ್ರಾಮದ ನಿಂಗೇಗೌಡರ ತೋಟದ ಮನೆಗೆ ಬುಧವಾರ ತಡ ರಾತ್ರಿ ಚಿರತೆ ನುಗ್ಗಿತ್ತು. ಈ ವೇಳೆ ನಿಂಗೇಗೌಡ ಹಾಗೂ ಪತ್ನಿ ಮನೆಯಲ್ಲೇ ಮಲಗಿದ್ದರು. ಕೊಟ್ಟಿಗೆಯಲ್ಲಿದ್ದ ಮೇಕೆಗಳ ಮೇಲೆ ದಾಳಿ ನಡೆಸಿದಾಗ ನಿಂಗೇಗೌಡ ಹಾಗೂ ಪತ್ನಿ ಉಪಾಯದಿಂದ ಹೊರ ಬರಲು ಯತ್ನಿಸಿದ್ದರು, ಈ ವೇಳೆ ಚಿರತೆ ಅವರ ಮೇಲೂ ದಾಳಿ ಮಾಡಿತ್ತು. ಅದರೂ ಅವರು ಹೊರಗೆ ಓಡಿ ಬರುವಲ್ಲಿ ಯಶಸ್ವಿಯಾಗಿದ್ದರು.

ಹೊರಗೆ ಬಂದ ತಕ್ಷಣ ನಿಂಗೇಗೌಡರು ಮನೆಯ ಚಿಲಕ ಹಾಕಿ ಚಿರತೆಯನ್ನು ಕೂಡಿ ಹಾಕಿದ್ದರು. ಘಟನೆಯಲ್ಲಿ ನಿಂಗೇಗೌಡರ ಬೆನ್ನು, ಸೊಂಟಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿಗೂ ತರಚಿದ ಗಾಯಗಳಾಗಿವೆ.

ಮನೆಯೊಳಗಿದ್ದ 6 ಮೇಕೆಯಲ್ಲಿ ಒಂದನ್ನು ಚಿರತೆ ಕೊಂದು ಹಾಕಿದೆ. ಗುರುವಾರ ಮುಂಜಾನೆ ಮನೆ ಸುತ್ತಲೂ ಜನ ಸೇರಿಕೊಳ್ಳುತ್ತಿದ್ದಂತೆ ಬಂಧಿಯಾಗಿದ್ದ ಚಿರತೆ ಭಯದಿಂದ ಅಡಗಿ ಕುಳಿತಿತ್ತು.

ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬರುವ ಲಸಿಕೆ ಹಾರಿಸಿ ಚಿರತೆ ಸೆರೆ ಹಿಡಿದರು.

ಚಿರತೆ ಅಡಗಿ ಕುಳಿತಿದ್ದ, ಅರಣ್ಯ ಇಲಾಖೆ ಸೆರೆಹಿಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT