ಶ್ರೀರಂಗಪಟ್ಟಣ: ಈಜಲು ಕಾವೇರಿ ನದಿಯಲ್ಲಿ ಇಳಿದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಹದೇವಪುರ ಬಳಿಯ ರಾಜಪರಮೇಶ್ವರಿ ಅಣೆಕಟ್ಟೆ ಬಳಿ ಶುಕ್ರವಾರ ಸಂಜೆ ನಡೆದಿದೆ.

ಹುಣಸೂರು ತಾಲ್ಲೂಕು ಗಾಗೇನಹಳ್ಳಿ ಗ್ರಾಮದ ವೀರಾಜಪ್ಪ ಅವರ ಪುತ್ರರಾದ ಮೈಸೂರು ವಿಕ್ರಾಂತ್ (ಜೆ.ಕೆ. ಟೈರ್ಸ್) ಕಾರ್ಖಾನೆ ನೌಕರ ಮಹೇಶ್ (35) ಮೃತಪಟ್ಟವರು.

ತಾಲ್ಲೂಕಿನ ತರೀಪುರ ಗ್ರಾಮದ ಸ್ನೇಹಿತನ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ಮಹೇಶ್, ಬಳಿಕ ಈಜಾಡಲು ಅಣೆಕಟ್ಟೆ ಬಳಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.

ಶವವನ್ನು ಶನಿವಾರ ನದಿಯಿಂದ ಮೇಲೆ ತೆಗೆದು ವಾರಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಪಿಎಸ್ಐ ವಿನೋದಕುಮಾರ್ ಎನ್, ಭೇಟಿ ನೀಡಿದ್ದರು. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.