ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆಯಲ್ಲಿ ಬಾಲ ಪ್ರತಿಭೆಗಳ ದಾಖಲೆ

Last Updated 8 ಸೆಪ್ಟೆಂಬರ್ 2021, 11:32 IST
ಅಕ್ಷರ ಗಾತ್ರ

ಮಂಡ್ಯ: ‘ಐದು ವರ್ಷದ ಎಲ್‌.ವೈಷ್ಣವಿ ಒಂದು ನಿಮಿಷದಲ್ಲಿ 128 ಬಾರಿ ಸೈಟ್‌ ಸಿಟಪ್ಸ್‌, 13 ವರ್ಷದ ಆರ್‌.ಹಂಸಪ್ರಿಯ 58 ಬಾರಿ ಸಿಟಪ್‌ ಹಾಗೂ ಫ್ರೆಂಟ್‌ ಕಿಕ್‌ ಮಾಡಿ ಕರಾಟೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ’ ಎಂದು ಕರಾಟೆ ತರಬೇತುದಾರ ಲೋಕೇಶ್‌ ಮೊದಲಿಯಾರ್‌ ಹೇಳಿದರು.

‘ವಿಷ್ಣು ಲಯನ್ಸ್‌ ಮಾರ್ಷಲ್‌ ಆರ್ಟ್ಸ್‌ ಕರಾಟೆ ಶಾಲೆಯಲ್ಲಿ ಕಳೆದ ಮೂರು ವರ್ಷದಿಂದ ನನ್ನ ಮಗಳು ವೈಷ್ಣವಿ ಹಾಗೂ ರಾಘವೇಂದ್ರ ಅವರ ಮಗಳು ಹಂಸಪ್ರಿಯ ತರಬೇತಿ ಪಡೆಯುತ್ತಿದ್ದಾರೆ. ನೊಬೆಲ್‌ ವಿಶ್ವ ದಾಖಲೆಗಾಗಿ ಕಳೆದ ಒಂದು ವರ್ಷದಿಂದ ತರಬೇತಿ ನೀಡಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ನಗರದ ಬಾಲಭವನದಲ್ಲಿ ಆಗಸ್ಟ್‌ 1ರಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎನ್‌ಡಬ್ಲ್ಯುಆರ್‌ ಅಧಿಕಾರಿಗಳು ಹಾಗೂ ಪರೀಕ್ಷಾ ವೀಕ್ಷಕರ ಸಮ್ಮುಖದಲ್ಲಿ ಇವರಿಬ್ಬರೂ ತಮ್ಮ ಪ್ರತಿಭೆ ಅನಾವರಣಗೊಳಿಸಿ ದಾಖಲೆ ಮೆರೆದಿದ್ದಾರೆ’ ಎಂದರು. ಜಿಲ್ಲಾ ಬಾಲಭವನದ ಸಂಯೋಜಕಿ ಕೋಮಲಾ, ಕಾರ್ಯದರ್ಶಿ ಶಿವರಂಜಿನಿ, ದಿವ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT