ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20,21 ಹಾಗೂ 22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಲಿರುವ ಮಹಿಳೆಯರಿಗೆ ಉತ್ತಮ ಆತಿಥ್ಯ ನೀಡಬೇಕು ಎಂದು ಮಹಿಳಾ ಸಮಿತಿಯ ಅಧ್ಯಕ್ಷೆ ಹಾಗೂ ಮಹಿಳಾ ರೈತ ಮುಖಂಡರಾದ ಸುನಂದಾ ಜಯರಾಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರಿಗೆ ಬೇಕಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಈ ಬಾರಿ ಹೆಚ್ವಿನ ಮಹಿಳೆಯರು ನೋಂದಣಿ ಮಾಡಿಕೊಂಡು ಭಾಗವಹಿಸಲು ಯೋಜನೆ ರೂಪಿಸಬೇಕು ಎಂದರು.
ಈ ಬಾರಿ ಪೂರ್ಣಕುಂಭ ವಿನೂತನವಾಗಿರಬೇಕು. ಮಹಿಳೆಯರು ಅಕ್ಷರ ಜಾತ್ರೆಯ ರೀತಿ ವಿವಿಧ ಸಾಹಿತಿಗಳ ಪುಸ್ತಕಗಳನ್ನು ಸಹ ಪೂರ್ಣಕುಂಭದಲ್ಲಿ ಕನ್ನಡ ಬಾವುಟ ಹಿಡಿದು ಸಾಗಲಿ. ಇದರಿಂದ ಮಹಿಳಾ ಸಾಕ್ಷರತೆಯ ಜಾಗೃತಿಗೆ ಜಿಲ್ಲೆ ನೀಡಿರುವ ಪ್ರಾಮುಖ್ಯತೆ ಇಡೀ ರಾಷ್ಟ್ರಕ್ಕೆ ತಿಳಿಯಲಿ ಎಂದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ ಮಾತನಾಡಿ, ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನದ ನೋಂದಣಿಗೆ ಕೊನೆಯವರೆಗೂ ಅವಕಾಶವಿದೆ. ಆದರೆ ನೆನಪಿನ ಕಾಣಿಕೆ ನೀಡಲು ಒಂದು ಅಂತಿಮ ದಿನಾಂಕ ನಿಗದಿ ಮಾಡಿ. ಆ ದಿನಾಂಕದವರೆಗೆ ನೋಂದಣಿ ಮಾಡಿಕೊಂಡವರಿಗೆ ಮಾತ್ರ ನೀಡಲಾಗುವುದು ಎಂದರು.
ಸಮಿತಿಯ ಸದಸ್ಯರು ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ಮಂಡಿಸಬೇಕಾದ ವಿಷಯಗಳ ಕುರಿತು ಮುಂದಿನ ಸಭೆಯಲ್ಲಿ ವಿಷಯಗಳನ್ನು ತಿಳಿಸಲಾಗುವುದು. ವಿಷಯಗಳನ್ನು ಮಾನ್ಯ ರಾಜ್ಯ ಅಧ್ಯಕ್ಷರಿಗೆ ಕಳುಹಿಸುವಂತೆ ಮನವಿ ಮಾಡಿದರು.
ಸಮಿತಿಯ ಸದಸ್ಯರು ಸಮ್ಮೇಳನಕ್ಕೆ ಕೊನೆಯ ಕ್ಷಣದಲ್ಲಿ ಸಮ್ಮೇಳನಕ್ಕೆ ಮಹಿಳೆಯರು ಆಗಮಿಸಿ ವಸತಿಯ ತೊಂದರೆಯಾದಲ್ಲಿ ತಮ್ಮ ಮನೆಯಲ್ಲೇ ಆತಿಥ್ಯ ನೀಡಲು ಸಿದ್ಧರಿದ್ದೇವೆ ಎಂದರು.
ಸಭೆಯಲ್ಲಿ ಮಹಿಳಾ ಸಮಿತಿ ಉಪಾಧ್ಯಕ್ಷರಾದ ಸೌಭಾಗ್ಯ ಮಹದೇವು, ಸಂಚಾಲಕಿ ಸಿ.ಜಿ ಸುಜಾತಾ ಕೃಷ್ಣ, ಸದಸ್ಯರಾದ ಮಾಲತಿ, ಹೇಮಾವತಿ, ಉಷಾರಾಣಿ, ಚಂದ್ರಕಲಾ ಶಿವರಾಮ, ಸಿ.ಕುಮಾರಿ, ಡಾ.ಅನಸೂಯ, ನೀಲಾ ಶಿವಮೂರ್ತಿ, ಸುಜಾತಾಮಣಿ, ಗಾಯತ್ರಿ, ಶೋಭಾ ವೆಂಕಟೇಶ್, ವಿನುತಾ, ಶಕುಂತಲಾ, ರೂಪಶ್ರೀ ಎಸ್.ಎಸ್, ಸುಜಾತಾ ಸಿದ್ದಯ್ಯ, ಪದ್ಮಾ ಶ್ರೀನಿವಾಸ, ಜಯಮ್ಮ, ಶ್ರೀಲತಾ, ಅನಿತಾ, ವರಲಕ್ಷ್ಮಿ, ಲತಾ, ಪುಷ್ಪಾ, ಅನುಪಮಾ ಪಾಲ್ಗೊಂಡಿದ್ದರು.
9 ಉಪಸಮಿತಿ ರಚನೆ
ಮಹಿಳಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸೀತಾಲಕ್ಷ್ಮಿ ಮಾತನಾಡಿ ‘ಮಹಿಳಾ ಸಮಿತಿ ಬೇರೆ ಸಮಿತಿಯೊಂದಿಗೆ ಸಮನ್ವಯವಾಗಿ ಕಾರ್ಯನಿರ್ವಹಿಸಿ ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಈ ಹಿನ್ನಲೆಯಲ್ಲಿ ಮಹಿಳಾ ಸಮಿತಿಯ ಐವರು ಸದಸ್ಯರನ್ನೊಳಗೊಂಡ ಆರೋಗ್ಯ ವಸತಿ ಸಾರಿಗೆ ಆಹಾರ ಆಸನ ಸ್ವಯಂ ಸೇವಕರು ಸಾಂಸ್ಕೃತಿಕ ನೊಂದಣಿ ಹಾಗೂ ಸಮನ್ವಯ ಎಂಬ 9 ಉಪಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.