ಮೇಲುಕೋಟೆ: ವಿಶ್ವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹಗಲು ಹೊತ್ತಿನಲ್ಲೇ ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು, ಪ್ರವಾಸಿಗರಲ್ಲಿ ಆತಂಕ ಉಂಟು ಮಾಡಿದೆ.

ಸುಮಾರು ದಿನಗಳಿಂದ ಬೆಟ್ಟ, ಪಂಚಕಲ್ಯಾಣಿ, ಧನುಷ್ ಕೋಟೆ, ರಾಯಗೋಪುರ ಸೇರಿದಂತೆ ಪ್ರವಾಸಿತಾಣಗಳ ಬಳಿ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ. ಇದರಿಂದ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.

ಜತೆಗೆ ಹೊಸಹಳ್ಳಿ, ಉಳಿಗೆರೆ, ಕಾಡೇನಹಳ್ಳಿ, ನಾಣಾಪುರ, ಬಳ್ಳಿಘಟ್ಟ, ಮದೇನಹಳ್ಳಿ ಗ್ರಾಮಗಳಲ್ಲೂ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನ ಓಡಾಡಲು ಹಾಗೂ ಜಮೀನು, ತೋಟಗಳಲ್ಲಿ ಹೋಗಲು ಭಯಪಡುವಂತಾಗಿದೆ.

ಮೇಲುಕೋಟೆ ದಳವಾಯಿಕೆರೆ ಬಳಿ ಶನಿವಾರ ರೈತರ ಜಮೀನಿನ ಬಳಿ ಚಿರತೆ ದಾಳಿ ಮಾಡಿ ಆಡನ್ನು ಕೊಂದು ಹಾಕಿದೆ. ಗ್ರಾಮದ ಒಳಗೂ ಚಿರತೆ ಬಂದಿದ್ದು ಆತಂಕ ಹೆಚ್ಚಿಸಿದೆ.

‘ಈ ಹಿಂದೆ ‘ಪ್ರಜಾವಾಣಿ’ ‘ಚಿರತೆ ಪ್ರತ್ಯಕ್ಷ’ದ ಬಗ್ಗೆ ವರದಿ ಪ್ರಕಟಿಸಿತ್ತು. ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಮನವಿ ಮಾಡಿದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಅಧಿಕಾರಿ ಹೆಚ್ಚೆತ್ತುಕೊಳ್ಳಬೇಕು ಎನ್ನುವುದು’ ಸ್ಥಳೀಯರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.