ಮಂಡ್ಯ: ಕಳೆದೆರಡು ತಿಂಗಳುಗಳಿಂದ ಸಂಸದೆ ಸುಮಲತಾ ಅವರು ಜಿಲ್ಲೆಯಿಂದ ಕಾಣೆಯಾಗಿದ್ದಾರೆ ಎಂದು ಆರೋಪಿಸಿ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಸುಮಕ್ಕ ಎಲ್ಲಿದ್ದೀಯಕ್ಕಾ’ ಎಂಬ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ತೀವ್ರವಾಗಿ ಹೆಚ್ಚಳವಾಗುತ್ತಿದ್ದರೂ ಜಿಲ್ಲೆಯ ಕಡೆ ಕಾಲಿಟ್ಟಿಲ್ಲ. ಸೋಂಕು ನಿಯಂತ್ರಿಸಲು ಜಿಲ್ಲಾಡಳಿತದ ಜೊತೆ ಕೆಲಸ ಮಾಡಬೇಕಾದ ಸಮುಲತಾ ಅವರು ಯಾವುದೇ ಸಭೆಗಳಲ್ಲಿ ಭಾಗವಹಿಸಿಲ್ಲ. ಸ್ವಾಭಿಮಾನದ ಹೆಸರಿನಲ್ಲಿ ಗೆಲುವು ಸಾಧಿಸಿದ ಸುಮಲತಾ ಅವರು ಜಿಲ್ಲೆಯನ್ನು ಮರೆತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಸುಮಲತಾ ಕಾಣೆಯಾಗಿದ್ದಾರೆ, ಸಂಸದರನ್ನು ಹುಡುಕಿಕೊಡಿ ಎಂಬ ಶೀರ್ಷಿಕೆಯೊಂದಿಗೆ ಸಂದೇಶ ಪ್ರಕಟಿಸುತ್ತಿದ್ದಾರೆ. ‘ಸುಮಲತಾ ಅವರು ಮತಕ್ಕಾಗಿ ಸೆರಗೊಡ್ಡಿ ಬೇಡಿಕೊಂಡಿದ್ದರು. ಈಗ ಕ್ಷೇತ್ರಕ್ಕೆ ಬರುವಂತೆ ಜನರು ಸೆರಗೊಡ್ಡಿ ಬೇಡಿಕೊಳ್ಳಬೇಕಾಗಿದೆ’ ಎಂಬ ಸಂದೇಶಗಳು ಹರಿದಾಡುತ್ತಿವೆ.

ಜೋಡೆತ್ತು ಎಲ್ಲಿವೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಟರಾದ ದರ್ಶನ್, ಯಶ್ ಅವರು ಸುಮಲತಾ ಪರ ಪ್ರಚಾರ ಮಾಡಿ ಜೋಡೆತ್ತು ಎಂದೇ ಪ್ರಸಿದ್ಧಿ ಪಡೆದಿದ್ದರು. ಆದರೆ ಜಿಲ್ಲೆ ಸಂಕಷ್ಟದಲ್ಲಿರುವಾಗ ಸುಮಲತಾ ಜೊತೆಗೆ ಜೋಡೆತ್ತುಗಳು ಎಲ್ಲಿವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.