ಡಿನ್ನರ್ ಪಾರ್ಟಿಯಲ್ಲಿ ಸಿಎಂ ಬದಲಾವಣೆ ಸಾಧ್ಯವಿಲ್ಲ?
ಮಂಡ್ಯ: ‘ಡಿನ್ನರ್ ಪಾರ್ಟಿ ಮಾಡೋದ್ರಲ್ಲಿ ತಪ್ಪಿಲ್ಲ ಅಂತ ಈಗಾಗಲೇ ಸಿಎಂ ಹೇಳಿದ್ದಾರೆ. ನಾವೇನು ಬೇರೆಯವ್ರಿಗೆ ಊಟ ಕೊಡ್ತಿದ್ದೀವಾ? ನಮ್ಮ ಮಂತ್ರಿಗಳಿಗೆ ನಾವು ಊಟ ಕೊಡ್ತಿದ್ದೀವಿ ಅಷ್ಟೇ. ಡಿನ್ನರ್ ಪಾರ್ಟಿಯಲ್ಲಿ ಸಿಎಂ ಬದಲಾವಣೆ ಮಾಡಲು ಆಗಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘60% ಕಮಿಷನ್ ಆರೋಪವನ್ನು ಬಿಜೆಪಿಯವರು ಆಧಾರವಿಲ್ಲದೆ ಮಾಡುತ್ತಿದ್ದಾರೆ. ಪೆನ್‌ಡ್ರೈವ್ ಇದೆ ಅಂದ್ರು, ಆದ್ರೆ ಅದನ್ನ ಬಿಡುಗಡೆ ಮಾಡಲೇ ಇಲ್ಲ. ನಾವು ಅವರ ಮೇಲೆ 40% ಕಮಿಷನ್ ಆರೋಪ ಮಾಡ್ಲಿಲ್ಲ. ಕಂಟ್ರಾಕ್ಟರ್ ಸಂಘದ ಅಧ್ಯಕ್ಷರು ಮಾಡಿದ್ದರು’ ಎಂದರು.