ಗುರುವಾರ , ಜೂನ್ 24, 2021
29 °C

ಪಿಎಸ್‌ಎಸ್‌ಕೆ ಬಾಯ್ಲರ್‌ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಶಾಸಕ ಮುರುಗೇಶ ನಿರಾಣಿ ಗುತ್ತಿಗೆ ಪಡೆದಿರುವ ಇಲ್ಲಿನ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ (ಪಿಎಸ್‌ಎಸ್‌ಕೆ) ಈ ಸಾಲಿನ ಕಬ್ಬು ಅರೆಯುವ ಸಿದ್ಧತೆಗಾಗಿ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಿ ಮಂಗಳವಾರ ಚಾಲನೆ ನೀಡಲಾಯಿತು.

ಕಾರ್ಖಾನೆಯಲ್ಲಿ 5 ಸಾವಿರ ಟಿಸಿಡಿ ಕಬ್ಬು ಅರೆಯುವ ಸಾಮರ್ಥ್ಯದ ವಿಸ್ತರಣೆಗೆ ಭೂಮಿಪೂಜೆಯನ್ನೂ ನೆರವೇರಿಸಲಾಯಿತು. ಆ ಮೂಲಕ ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಚಾಲನೆ ಸಿಕ್ಕಂತಾಯಿತು.

ಮುರುಗೇಶ್‌ ಆರ್.ನಿರಾಣಿ ಮಾತನಾಡಿ ‘ಪಿಎಸ್‌ಎಸ್‌ಕೆಯುನ್ನು ಕಾನೂನುಬದ್ದವಾಗಿ ಪಾರದರ್ಶಕ ಇ–ಟೆಂಡರ್‌ ಮೂಲಕ ₹ 405 ಕೋಟಿಗೆ 40 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆಯಲಾಗಿದೆ. ಮುಂದಿನ 5 ವರ್ಷಗಳಲ್ಲಿ  40 ಮೆಗಾವಾಟ್‌ ವಿದ್ಯುತ್ ಉತ್ಪಾದನೆ, ಎಥನಾಲ್‌, ಸ್ಪಿರಿಟ್‌, ರಸಗೊಬ್ಬರ, ಸ್ಯಾನಿಟೈಸರ್ ಸೇರಿ ಇತರ ಉಪ ಉತ್ಪನ್ನಗಳ ಘಟಕ ಸ್ಥಾಪಿಸಲಾಗುವುದು’ ಎಂದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಅದಿಚುಂಚನಗಿರಿ ನಿರ್ಮಲಾನಂದನಾಥಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ಸಂಸದೆ ಸುಮಲತಾ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಇದ್ದರು. ಇದೇ ವೇಳೆ ಮುರುಗೇಶ್ ಆರ್. ನಿರಾಣಿ ಅವರ 54ನೇ ಜನ್ಮದಿನ ಆಚರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು