ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ | ಬಿಸಿಲಿನ ತಾಪ: ಪಕ್ಷಿಗಳಿಗೆ ನೀರು ಇಡಲು ಕರೆ

Published 21 ಏಪ್ರಿಲ್ 2024, 13:05 IST
Last Updated 21 ಏಪ್ರಿಲ್ 2024, 13:05 IST
ಅಕ್ಷರ ಗಾತ್ರ

ಮಳವಳ್ಳಿ: ಬಿಸಿಲಿನ ತಾಪ ಹಿನ್ನಲೆ ಸೌಹಾರ್ದ ನಾಗರಿಕ ವೇದಿಕೆ ವತಿಯಿಂದ ಪಟ್ಟಣದ ಹಲವೆಡೆ ಭಾನುವಾರ ಪಕ್ಷಿಗಳಿಗೆ ನೀರು ಮತ್ತು ಕಾಳುಗಳನ್ನು ಹಾಕುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖಂಡ ಬಿ.ಪುಟ್ಟಬಸವಯ್ಯ ಚಾಲನೆ ನೀಡಿ ಮಾತನಾಡಿ, ‘ಪರಿಸರದ ನಾಶದಿಂದಾಗಿ ತಾಪಮಾನ ಹೆಚ್ಚಾಗಿ ಮಳೆಯ ಪ್ರಮಾಣ ಕುಸಿತದಿಂದ ಬರದ ಛಾಯೆ ಕಾಡುತ್ತಿದೆ. ನಾವು ಮಾಡಿದ ತಪ್ಪಿಗೆ ಪಕ್ಷಿ ಸಂಕುಲಗಳು ನೀರು, ಆಹಾರವಿಲ್ಲದೆ ಸಂಕಷ್ಟದಲ್ಲಿರುವ ಸಂದರ್ಭ ಪ್ರತಿಯೊಬ್ಬರು ಮನೆಗಳ ಮೇಲೆ ನೀರು ಹಾಗು ಕಾಳುಗಳನ್ನು ಇಡುವ ಪ್ರಯತ್ನ ಮಾಡುವ ಮೂಲಕ ಪಕ್ಷಿ ಸಂಕುಲ ಉಳಿವಿಗೆ ಮುಂದಾಗಬೇಕು’ ಎಂದು ಹೇಳಿದರು.

ವೇದಿಕೆಯ ಪದಾಧಿಕಾರಿಗಳು ತಾಲ್ಲೂಕು ಪಂಚಾಯತಿ ಆವರಣ, ಕೃಷಿಕ ಸಮಾಜದ ಆವರಣ, ನ್ಯಾಯಾಲಯದ ಆವರಣ, ಐಟಿಐ ಕಾಲೇಜು ಆವರಣ, ಸ್ಟೇಡಿಯಂ ಆವರಣ ತಾಲ್ಲೂಕು ಕಚೇರಿ ಆವರಣ ಹಾಗೂ ಪೊಲೀಸ್ ಠಾಣಾ ಆವರಣಗಳಲ್ಲಿನ ಮರಗಳಲ್ಲಿ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿದರು.

ವೇದಿಕೆಯ ಪುಟ್ಟಸ್ವಾಮಿ, ರೂಪೇಶ್, ಆನಂದ್, ಡಾ.ಗಿರೀಶ್, ಶ್ರೀಕಂಠಸ್ವಾಮಿ, ಆಶಾ ಆನಂದ್, ರೇಖಾ ಮಾದೇಶ್, ಭಾರತಿ ಮಂಜುನಾಥ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿಕ್ಷಕ ವೇಣುಗೋಪಾಲ್, ಮಾದೇವಣ್ಣ, ಪುಟ್ಟಬಸವಣ್ಣ, ಕೃಷ್ಣಣ್ಣ, ಕಾಂತರಾಜ್, ರಾಮಕೃಷ್ಣ ಲೋಕೇಶ್, ಲೀಲಾ ಕುಮಾರ್, ಹೇಮಾ ಹರ್ಷ, ಚೇತನ್, ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಹೇಶ್ ಕುಮಾರ್, ಚಿಕ್ಕಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT