ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತದಾರರನ್ನು ಆಕರ್ಷಿಸಲು ಮತಗಟ್ಟೆಗಳಿಗೆ ವಿಶೇಷ ರಂಗು!

Published : 25 ಏಪ್ರಿಲ್ 2024, 14:14 IST
Last Updated : 25 ಏಪ್ರಿಲ್ 2024, 14:14 IST
ಫಾಲೋ ಮಾಡಿ
Comments

ಶ್ರೀರಂಗಪಟ್ಟಣ: ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ, ಮತದಾರನ್ನು ಮತಗಟ್ಟೆಗಳತ್ತ ಆಕರ್ಷಿಸಲು ಸ್ವೀಪ್‌ ಸಮಿತಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿದ್ದು, ಗಮನ ಸೆಳೆಯುತ್ತಿವೆ.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ (ಮತಗಟ್ಟೆ ಸಂಖ್ಯೆ 165) ಯನ್ನು ರಂಗನತಿಟ್ಟು ಪಕ್ಷಿಧಾಮದ ಮಾದರಿಯಲ್ಲಿ ಅಲಂಕರಿಸಲಾಗಿದೆ. ಮತಗಟ್ಟೆಯ ಹೊರಗೆ ಬಗೆ ಬಗೆಯ ಪಕ್ಷಿಗಳು ಮತ್ತು

ಪಕ್ಷಿಧಾಮದ ಪ್ರವೇಶ ದ್ವಾರದ ಮಾದರಿಯನ್ನು ಚಿತ್ರಿಸಲಾಗಿದೆ. ದೂರದಿಂದ ನೋಡಿದರೆ ಪಕ್ಷಿಗಳು ಕುಳಿತಿರುವಂತೆ ಭಾಸವಾಗುತ್ತಿದೆ.

‘ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಸ್ಥಾಪಿಸಿರುವ ಯುವ ಮತಗಟ್ಟೆ (ಮತಗಟ್ಟೆ ಸಂಖ್ಯೆ 213 ) ಕೂಡ ವಿಶೇಷವಾಗಿದೆ. ಈ ಮತಗಟ್ಟೆಗೆ ಯುವ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮತಗಟ್ಟೆಯ ಹೊರಗೆ ಯುವ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವ ಚಿತ್ರಗಳಿವೆ. ತಾಲ್ಲೂಕಿನ ನಗುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 202ನ್ನೂ ಯುವ ಮತಗಟ್ಟೆಯಾಗಿ ಪರಿವರ್ತಿಸಲಾಗಿದೆ’ ಎಂದು ತಾಲ್ಲೂಕು ಸ್ವೀಪ್‌ ಸಮಿತಿ ಅಧ್ಯಕ್ಷರೂ ಆದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು ತಿಳಿಸಿದ್ದಾರೆ.

‘ತಾಲ್ಲೂಕಿನ ಹುರುಳಿ ಕ್ಯಾತನಹಳ್ಳಿಯ ಮತಗಟ್ಟೆ ಸಂಖ್ಯೆ 247 ಮತ್ತು ಕೆಆರ್‌ಎಸ್‌ ಕಿರಿಯ ಪ್ರಾಥಮಿಕ ಶಾಲೆಯ ಮತಟ್ಟೆ 205ನ್ನು ಸಾಂಸ್ಕೃತಿಕ (ಎತ್ನಿಕ್‌) ಮತಗಟ್ಟೆಗಳನ್ನಾಗಿ ಸಿಂಗರಿಸಲಾಗಿದೆ. ಮತಗಟ್ಟೆಗಳ ಮುಂದೆ ತಳಿರು, ತೋರಣ ಕಟ್ಟಿ ಸಿಂಗರಿಸಿದ್ದು, ಅಪ್ಪಟ ಹಳ್ಳಿ ಸೊಗಡಿನ ಮಾದರಿಯ ಸಾಂಪ್ರದಾಯಿಕ ಸ್ವರೂಪ ನೀಡಲಾಗಿದೆ’ ಎಂದು ಅವರು ಹೇಳಿದರು..

‘ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮತಗಟ್ಟೆ–1, ತೂಬಿನಕೆರೆ, ಅರಕೆರೆ ಮತಗಟ್ಟೆ–1, ಪಟ್ಟಣದ ಪುರಸಭೆ ಮತಗಟ್ಟೆ–11 ಮತ್ತು ಗಂಜಾಂ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ–5ನ್ನು ಪಿಂಕ್‌ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ. ತಾಲ್ಲೂಕಿನ ಕೊಡಿಯಾಲ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ–2 ವಿಶೇಷ ಸಾಮರ್ಥ್ಯವುಳ್ಳ (ಅಂಗವಿಕಲರ) ಮತಗಟ್ಟೆಯಾಗಿದ್ದು, ಅಂತಹವರನ್ನೇ ಈ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಅವರು ವಿವಿರಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿ ಸ್ಥಾಪಿಸಿರುವ ಯುವ ಮತಗಟ್ಟೆ (ಮತಗಟ್ಟೆ ಸಂಖ್ಯೆ 213 )ಯ ಮುಂದೆ ಮತದಾನ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಯುವ ಸಿಬ್ಬಂದಿ
ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿ ಸ್ಥಾಪಿಸಿರುವ ಯುವ ಮತಗಟ್ಟೆ (ಮತಗಟ್ಟೆ ಸಂಖ್ಯೆ 213 )ಯ ಮುಂದೆ ಮತದಾನ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಯುವ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT