ಶ್ರೀರಂಗಪಟ್ಟಣ: ರಥ ಸಪ್ತಮಿ ನಿಮಿತ್ತ ಪಟ್ಟಣದಲ್ಲಿ ಭಾನುವಾರ ಶ್ರೀರಂಗನಾಥಸ್ವಾಮಿ ದೇವರ ಬ್ರಹ್ಮ ರಥೋತ್ಸವದ ಸಡಗರ, ಸಂಭ್ರಮದಿಂದ ನಡೆಯಿತು.

ಮಧ್ಯಾಹ್ನ 2.30ಕ್ಕೆ ರೇವತಿ ನಕ್ಷತ್ರದಲ್ಲಿ ಶ್ರೀರಂಗನಾಥಸ್ವಾಮಿ ದೇವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕಾಗಿ ಐದು ಅಂತಸ್ತಿನ ರಥವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಭಗವಾಧ್ವಜಗಳು, ಬಣ್ಣ ಬಣ್ಣದ ವಸ್ತ್ರಗಳು ಹಾಗೂ ಬಗೆ ಬಗೆಯ ಹೂಗಳಿಂದ ಕಾಷ್ಠ ರಥವನ್ನು ಅಲಂಕರಿಸಲಾಗಿತ್ತು. ರಥದ ತುತ್ತ ತುದಿಯಲ್ಲಿ ಕಳಶ ಮತ್ತು ದಂತದ ಮಾದರಿಗಳು ಗಮನ ಸೆಳೆದವು. ಸುಮಾರು 40 ಅಡಿ ಎತ್ತರದ ರಥವನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಎಳೆದರು. ರಥವನ್ನು ಎಳೆಯುವಾಗ ಗೋವಿಂದ..., ರಂಗನಾಥ.... ಇತ್ಯಾದಿ ಘೋಷಣೆಗಳು ಮೊಳಗಿದವು.

ಜಿಲ್ಲಾಧಿಕಾರಿ ಕುಮಾರ ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಮಧ್ಯಾಹ್ನ 3.20ಕ್ಕೆ ಚಾಲನೆ ನೀಡಿದರು. ಅದೇ ಸಮಯಕ್ಕೆ ಗರುಡ ರಥದ ಸುತ್ತ ಹಾರಾಡಿ ರಾಜ ಗೋಪುರದ ಮೇಲೆ ಕುಳಿತ ಕೌತುಕವನ್ನು ಭಕ್ತರು ಕಣ್ತುಂಬಿಕೊಂಡರು. ಕಹಳೆಗಳು ಮೊಳಗುತ್ತಿದ್ದಂತೆಯೇ ರಥ ಮುನ್ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ತಹಶೀಲ್ದಾರ್ ಚೇತನಾ ಯಾದವ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಉಮಾ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಸೋಮಶೇಖರ್ ಕೂಡ ರಥವನ್ನು ಎಳೆದರು.

ದೇವಾಲಯದ ಸುತ್ತ ಒಂದು ತಾಸು ಕಾಲ ರಥ ಸಂಚರಿಸಿತು. ರಥ ಸಾಗಿದ ಮಾರ್ಗದ ಉದ್ದಕ್ಕೂ ಭಕ್ತರು ಹಣ್ಣು, ದವನ ಎಸೆದರು. ದೂಪ ಮತ್ತು ಕರ್ಪೂರದ ಸೇವೆ ಸಲ್ಲಿಸಿದರು. ಹರಕೆ ಹೊತ್ತವರು ದೇವಾಲಯದ ಆಸು ಪಾಸಿನಲ್ಲಿ ಹಣ್ಣು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.

ಇದಕ್ಕೂ ಮುನ್ನ ದೇವಾಲಯದಲ್ಲಿ ಮೂಲ ದೇವರಿಗೆ ವಿಶೇಷ ಪೂಜೆಗಳು ನಡೆದವು. ರಥದಲ್ಲಿ ಪ್ರತಿಷ್ಠಾಪಿಸುವ ಮುನ್ನ ಉತ್ಸವ ಮೂರ್ತಿಯನ್ನು ಹತ್ತು ಮಂಟಪಗಳಲ್ಲಿ ಇರಿಸಿ ಮಂಟಪೋತ್ಸವ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ಅವರ ನೇತೃತ್ವದಲ್ಲಿ ಮಂಟಪೋತ್ಸವದ ವಿಧಿ, ವಿಧಾನಗಳು ನಡೆದವು. ಪೊಲೀಸ್ ಬದೋಬಸ್ತ್ ಮಾಡಲಾಗಿತ್ತು.

ಸೂರ್ಯ ಮಂಡಲೋತ್ಸವ: ಮುಂಜಾನೆ ಪಟ್ಟಣದಲ್ಲಿ ಸೂರ್ಯ ಮಂಡಲೋತ್ಸವ ಜರುಗಿತು. ಶ್ರೀರಂಗನಾಥಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಸೂರ್ಯನ ಮಾದರಿಯ ರಥದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಆರಂಭವಾದ ಉತ್ಸವ ರಾಜ ಬೀದಿಗಳಲ್ಲಿ ಸಾಗಿತು. ರಂಗನಾಯಕಿ ಅಮ್ಮನವರ ಉತ್ಸವ ಕೂಡ ಜತೆಯಲ್ಲೇ ಸಾಗಿತು. ದೇವಿಯ ಉತ್ಸವ ಮೂರ್ತಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಮಂಗಳ ವಾದ್ಯ ಸಹಿತ ಊರಿನ ಚತುರ್ಬೀದಿಗಳಲ್ಲಿ ಸಾಗಿದ ಉತ್ಸವಕ್ಕೆ ಪೂಜೆ, ಪುನಸ್ಕಾರಗಳು ಸಾಂಗೋಪಾಂಗವಾಗಿ ನಡೆದವು. ಸ್ಥಳೀಯರು ಮಾತ್ರವಲ್ಲದೆ ಮಂಡ್ಯ, ಮೈಸೂರು, ಬೆಂಗಳೂರು, ಚಾಮರಾಜನಗರ ಇತರ ಊರುಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.