ಶ್ರೀರಂಗಪಟ್ಟಣ: ‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಕಾರ್ಯದಲ್ಲಿ ನಿಗದಿತ ಗುರಿ ತಲುಪದ ಬಿಎಲ್ಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಹಶೀಲ್ದಾರ್ ಚೇತನಾ ಯಾದವ್ ಅವರಿಗೆ ಸೂಚಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಅಜೀಂ ಪ್ರೇಂಜಿ ಫೌಂಡೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಮತ್ತು ರಂಗನಾಥನಗರ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಇದುವರೆಗೆ ಶೇ 75 ಮಾತ್ರ ಮ್ಯಾಪಿಂಗ್ ಆಗಿದೆ. ಕೊಡಿಯಾಲ, ಬೆಳಗೊಳ, ಶ್ರೀರಂಗಪಟ್ಟಣ ಮತಗಟ್ಟೆಗಳ ಕೆಲವು ಬಿಎಲ್ಒಗಳು ಶೇ 60ರಷ್ಟು ಸಾಧನೆಯನ್ನೂ ಮಾಡಿಲ್ಲ. ಮತದಾರರ ಪಟ್ಟಿಯಲ್ಲಿ ಅರ್ಹರ ಹೆಸರು ಬಿಟ್ಟು ಹೋದರೆ ಬಿಪಿಎಲ್ ಪಡಿತರ ಚೀಟಿ ರದ್ದಾಗುತ್ತದೆ. ಸರ್ಕಾರದ ಸವಲತ್ತುಗಳು ಸಿಗುವುದಿಲ್ಲ. ರಾಜಕೀಯ ಸಂಘರ್ಷಗಳಿಗೂ ಕಾರಣವಾಗುತ್ತದೆ. ಚುನಾವಣಾ ಆಯೋಗದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಹಾಗಾಗಿ ಎಸ್ಐಆರ್ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಾಲ್ಲೂಕಿನ ನೀಲನಕೊಪ್ಪಲು ಮತಗಟ್ಟೆಯ ಬಿಎಲ್ಒ ಶೇ 104ರಷ್ಟು ಸಾಧನೆ ಮಾಡಿದ್ದು, ಅವರನ್ನು ಅನುಸರಿಸಬೇಕು’ ಎಂದು ತಿಳಿಸಿದರು.

‘ಅಂಗನವಾಡಿ ಕೇಂದ್ರಕ್ಕೆ ಬಡ ಕುಟುಂಬದ ಮಕ್ಕಳೇ ಹೆಚ್ಚು ಬರುತ್ತಾರೆ. ಅವರನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲಿ ಅಕ್ಷರ ಇತರ ಚಟುವಟಿಕೆಗಳನ್ನು ಕಲಿಸಬೇಕು. ಅಜೀಂ ಪ್ರೇಂ ಜೀ ಫೌಂಡೇಷನ್ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ₹1500 ಕೋಟಿ ಹಣ ಖರ್ಚು ಮಾಡುತ್ತಿದೆ. ಟಿವಿ, ವಾಟರ್ ಫಿಲ್ಟರ್, ಅಡುಗೆ ಪರಿಕರಗಳನ್ನು ನೀಡುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಸಮವಸ್ತ್ರ: ‘ತಾಲ್ಲೂಕಿನಲ್ಲಿ 221 ಅಂಗನವಾಡಿ ಕೇಂದ್ರಗಳಿದ್ದು, ಎಲ್ಲ ಮಕ್ಕಳಿಗೆ ಎ.ಎಸ್. ಬಂಡಿಸಿದ್ದೇಗೌಡ ಫೌಂಡೇಷನ್ ವತಿಯಿಂದ ಸಮವಸ್ತ್ರ ನೀಡುತ್ತೇನೆ. ಎಲ್ಲ ಮಕ್ಕಳಿಗೂ ಏಕರೂಪದ ಹಾಗೂ ಗುಣಮಟ್ಟದ ಸಮವಸ್ತ್ರ ನೀಡಲಾಗುವುದು. ಅಂಗನವಾಡಿ ಕೇಂದ್ರಗಳ ಅಗತ್ಯತೆಗಳ ಬಗ್ಗೆ ತಿಳಿಸಿದರೆ ಪೂರೈಸಲಾಗುವುದು’ ಎಂದು ಭರವಸೆ ನೀಡಿದರು.

ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ವಾಟರ್ ಫಿಲ್ಟರ್ ಮತ್ತು ಅಡುಗೆ ಸಿದ್ಧತಾ ಸಾಮಗ್ರಿಗಳನ್ನು ವಿತರಿಸಲಾಯಿತು. ತಹಶೀಲ್ದಾರ್ ಚೇತನಾ ಯಾದವ್, ಅಜೀಂ ಪ್ರೇಂಜಿ ಫೌಂಡೇಷನ್ ಜಿಲ್ಲಾ ಸಂಯೋಜಕಿ ಹರಿಪ್ರಿಯಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ನಂದೀಶ್, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಪುಷ್ಪಾ, ಆಶಾ ಇದ್ದರು.

ಅಂಗನವಾಡಿ ಕೇಂದ್ರಗಳಗೆ ಪರಿಕರ ವಿತರಣೆ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಕಲೇಶ್ವರ್ ಮಾತನಾಡಿ ‘ತಾಲ್ಲೂಕಿನ 43 ಅಂಗನವಾಡಿ ಕೇಂದ್ರಗಳು 2.0 ಯೋಜನೆಗೆ ಆಯ್ಕೆಯಾಗಿದ್ದು ಟಿವಿ ವಾಟರ್ ಫಿಲ್ಟರ್ ಅಡುಗೆ ತಯಾರಿ ಪರಿಕರಗಳನ್ನು ನೀಡಲಾಗಿದೆ. ಪ್ರತಿ ಕೇಂದ್ರವನ್ನು ಪೋಷಣ್ ಟ್ರ್ಯಾಕರ್ ವ್ಯಾಪ್ತಿಗೆ ತರಲಾಗಿದೆ. ಮಕ್ಕಳು ಗರ್ಭಿಣಿಯರು ಹಾಗೂ ಬಾಣಂತಿಯರ ನಿಖರ ಮಾಹಿತಿ ಸಂಗ್ರಹಿಸಲಾಗಿದೆ. ಅಕ್ಕ ಪಡೆ ರಚಿಸಲಾಗಿದೆ. ಎಲ್ಕೆಜಿ ಮತ್ತು ಯುಕೆಜಿ ತರಗತಿ ಮಕ್ಕಳಿಗೆ ಪ್ರೋಗ್ರೆಸ್ ಕಾರ್ಡ್ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.