ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ‘ಮೂಲ ಮಂದಿರ ಚಲೋ’ 4ಕ್ಕೆ

Last Updated 31 ಮೇ 2022, 12:09 IST
ಅಕ್ಷರ ಗಾತ್ರ

ಮಂಡ್ಯ: ಮೂಡಲಬಾಗಿಲು ಆಂಜನೇಯನ ದೇವಾಲಯವಾಗಿದ್ದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹನುಮನ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜೂನ್‌ 4ರಂದು ‘ಮೂಲ ಮಂದಿರ ಚಲೋ’ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಮುಖಂಡರು ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಬರುವ ಸಾವಿರಾರು ಹನುಮಭಕ್ತರು ಅಂದು ಬೆಳಿಗ್ಗೆ 10.30ಕ್ಕೆ ಮಸೀದಿಯಾಗಿರುವ ಮೂಲ ಮಂದಿರ ಪ್ರವೇಶ ಮಾಡಲಿದ್ದಾರೆ. ದೇವಾಲಯವನ್ನು ಕೆಡವಿ ಟಿಪ್ಪು ಸುಲ್ತಾನ್‌ ಮಸೀದಿ ನಿರ್ಮಾಣ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಮಂದಿರವನ್ನು ಅತಿಕ್ರಮಣ ಮಾಡಿ, ನಮಾಜ್‌ ಮಾಡಲಾಗುತ್ತಿದೆ, ಮದರಸಾ ನಡೆಸಲಾಗುತ್ತಿದೆ. ಅತಿಕ್ರಮಣಕಾರರನ್ನು ಕೂಡಲೇ ಹೊರಹಾಕಬೇಕು ಎಂದು ಒತ್ತಾಯಿಸಲಾಗುವುದು ಎಂದಿದ್ದಾರೆ.

‘ಮುಚ್ಚಲ್ಪಟ್ಟಿರುವ ಗರ್ಭಗುಡಿ ತೆರೆಯಬೇಕು, ಬಾವಿ, ಕಲ್ಯಾಣಿಯಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಬೇಕು. ಒಳಾಂಗಣ ಹಾಗೂ ಹೊರಾಂಗಣದಲ್ಲಿ ವಿಡಿಯೊ ಸರ್ವೆ, ಉತ್ಖನನ ನಡೆಯಬೇಕು’ ಎಂದು ಎಂದು ವಿಎಚ್‌ಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು, ಸಂಯೋಜಕ ಹೊಸ ಆನಂದೂರು ಬಸವರಾಜು, ಉಪಾಧ್ಯಕ್ಷ ಬಲರಾಮೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT