ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ‘ಯುವ ಪ್ರತಿಭೆಗಳ ಬೆಳವಣಿಗೆಗೆ ಪ್ರೋತ್ಸಾಹ ಮುಖ್ಯ’

ಜಾನಪದ ವಿದ್ವಾಂಸ ಡಿ.ಕೆ.ರಾಜೇಂದ್ರ ಸಲಹೆ
Last Updated 16 ಮೇ 2022, 3:57 IST
ಅಕ್ಷರ ಗಾತ್ರ

ನಾಗಮಂಗಲ: ಯುವ ಪ್ರತಿಭೆಗಳ ಅನಾ ವರಣಕ್ಕೆ ಸಂಘ ಸಂಸ್ಥೆಗಳ ಪ್ರೋತ್ಸಾಹ ಅತ್ಯಂತ ಮುಖ್ಯವಾಗಿದೆ ಎಂದು ಜಾನಪದ ವಿದ್ವಾಂಸ ಡಿ.ಕೆ.ರಾಜೇಂದ್ರ ಹೇಳಿದರು.

ಪಟ್ಟಣದ ಕುವೆಂಪು ಶಾಲೆಯಲ್ಲಿ ಭಾನುವಾರ ಹಾರ್ಟ್ ಸಂಸ್ಥೆ ನಾಗಮಂಗಲ ಮತ್ತು ಜಿಲ್ಲಾ ಯುವ ಬರಹಗಾರರ ಬಳಗವು ಡಾ.ಬಾಲ ಗಂಗಾಧರನಾಥ ಮಹಾಸ್ವಾಮೀಜಿ ಸ್ಮರಣಾರ್ಥ ರಾಜ್ಯಮಟ್ಟದ ಕವಿಕಾವ್ಯ ಮೇಳ, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ, ಡಾ.ಬಾಲ ಗಂಗಾಧರನಾಥ ಸ್ವಾಮೀಜಿ ಸಮಾಜ ಸೇವಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಅವರು ಮಾತ ನಾಡಿದರು.

ಕಾರ್ಯಕ್ರಮದಲ್ಲಿ ಡಾ.ಬಾಲಗಂಗಾ ಧರನಾಥ ಸ್ವಾಮೀಜಿ ಸಮಾಜ ಸೇವಾ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ ಕರ್ನಾಟಕ ವಿಕಾಸ ರಂಗ ಅಧ್ಯಕ್ಷ ವ.ಚ.ಚನ್ನೇಗೌಡ, ಮಂಡ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ ಬನ್ನಂಗಾಡಿ, ನಾಗಮಂಗಲ ಎಸ್.ಎ.ಸಿ.ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ.ಲೋಕೇಶ್, ರಾಮನಗರದ ಶಾಂತಿನಿಕೇತನ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಕುಮಾರ ಸ್ವಾಮಿ, ಮೈಸೂರಿನ ಕವಿ ಮತ್ತು ಜಲಮೂಲ ಸಂರಕ್ಷಕ ಹಡವನಹಳ್ಳಿ ವೀರಣ್ಣಗೌಡ, ಕೋಲಾರ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಡಿ.ಸಿ. ಶೃತಿ, ಬಾಗಲಕೋಟೆಯ ಸಾಹಿತಿ ಮತ್ತು ವಿಮರ್ಶಕ ಡಾ.ಪ್ರಕಾಶ್ ಖಾಡೆ, ಚಿಕ್ಕಮಗಳೂರಿನ ಜಾನಪದ ಸಂಶೋಧಕಿ ಡಾ. ಮಂಜುಳಾ ಹುಲ್ಲ ಹಳ್ಳಿ, ಪತ್ರಕರ್ತ ಪುಟ್ಟಲಿಂಗಯ್ಯ ಕುಂಟನ ಹಳ್ಳಿ, ಪ್ರಕಾಶಕಿ ಹಾಲತಿ ಲೋಕೇಶ್ ಅವರಿಗೆ ಪ್ರದಾನ ಮಾಡಲಾಯಿತು.

ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ಮಡಿಕೇರಿಯ ಡಿವೈಎಸ್ಪಿ ಜಿ.ಎಸ್.ಗಜೇಂದ್ರ ಪ್ರಸಾದ್, ಹಾವೇರಿಯ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ.ಸಂತೋಷ ಹಾನಗಲ್ಲ, ಮಂಡ್ಯದ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ತರಬೇತುದಾರ ಡಾ.ಎಚ್.ಆರ್.ಕನ್ನಿಕಾ, ಬೆಂಗಳೂರಿನ ಸಮಾಜಸೇವಕ ಸಿ.ಮಂಜುನಾಥ್‌ಗೌಡ, ಸಮಾಜ ಸೇವಕ ಎಸ್.ಎಂ.ನಟರಾಜ್ ಜೀವಧಾರೆ ಅವರಿಗೆ ಪ್ರದಾನ ಮಾಡಲಾಯಿತು.

ರಾಜ್ಯಮಟ್ಟದ ಕವಿಕಾವ್ಯ ಮೇಳದಲ್ಲಿ ತಾಲ್ಲೂಕು, ಜಿಲ್ಲೆಯ ಯುವ ಕವಿಗಳು ಸೇರಿ ಸುಮಾರು 70 ಕವಿಗಳು ಬಂದಿದ್ದರು.

ಶಾಸಕ ಸುರೇಶ್ ಗೌಡ, ಹಿರಿಯ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜು, ತೂಬಿನಕೆರೆ ನಿತೀಶ್, ಜಿಲ್ಲಾ ಯುವ ಬರಹಗಾರರ ವೇದಿಕೆ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಹಾರ್ಟ್ ಸಂಸ್ಥೆ ಅಧ್ಯಕ್ಷ ಎಂ.ಸಿ.ಸೌಂದರ್ಯ ಗುರು, ಪ್ರಧಾನ ಕಾರ್ಯದರ್ಶಿ ಜಿ.ಬೊಮ್ಮನಹಳ್ಳಿ ವಿಜಯ್ ಕುಮಾರ್, ನಿರ್ದೇಶಕ ವಸಂತ್ ಕುಮಾರ್ ದೇವಾಲಪುರ, ತಾಲ್ಲೂಕು ಯುವ ಬರಹಗಾರರ ಬಳಗದ ತಾಲ್ಲೂಕು ಅಧ್ಯಕ್ಷ ದೇವಾನಂದ್ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT