ಭಾನುವಾರ, ಏಪ್ರಿಲ್ 11, 2021
32 °C

ನಾಟಿ ಕೋಳಿ ಎಂದು ಮಾರಾಟವಾಗುತ್ತಿರುವ ತಮಿಳುನಾಡಿನ ಹೈಬ್ರೀಡ್‌ ಕೋಳಿ ತಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತಮಿಳುನಾಡಿನ ಹೈಬ್ರಿಡ್ ಕೋಳಿಗಳನ್ನು ಜಿಲ್ಲೆಯಲ್ಲಿ ನಾಟಿ ಕೋಳಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ನಾಟಿ ಕೋಳಿ ಸಾಕಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಲ್ಕೆರೆ ಗ್ರಾಮದ ಸಾಕಾಣಿಕೆದಾರ ಸಂತೋಷ್‌ ಆಗ್ರಹಿಸಿದರು.

‘ತಮಿಳುನಾಡಿನ ಎಸ್‍ಆರ್‌ಎಸ್ ಕಂಪನಿಯು ಬಾಯ್ಲರ್ ಕೋಳಿಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿದ್ದು, ಸಾಕಾಣಿಕೆದಾರರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ನಾಟಿ ಕೋಳಿಗಳನ್ನು ಜೋಳ, ರಾಗಿ, ಭತ್ತ ಮತ್ತು ಸ್ವಲ್ಪ ಪ್ರಮಾಣದ ಫೀಡ್ಸ್ ನೀಡಿ ಬೆಳೆಸಿ ಮಾರಾಟಕ್ಕೆ ಒದಗಿಸಲು 100 ದಿನಗಳಿಂದ 120 ದಿನಗಳು ಬೇಕಾಗಿದ್ದು, ತಮಿಳುನಾಡು ಕಂಪನಿಯ ಕೋಳಿಗಳು 50-70 ದಿನಗಳ ಒಳಗೆ ವಿಷಯುಕ್ತ ರಾಸಾಯನಿಕ ಔಷಧ ನೀಡಿ ಕಳಪೆ ಗುಣಮಟ್ಟದ ಫೀಡ್ಸ್ ನೀಡಿ ಬೆಳೆಸಲಾಗುತ್ತಿದೆ. ಈ ಕೋಳಿಗಳನ್ನು ಕೆ.ಜೆ.ಗೆ ₹ 90 ರಂತೆ ಖರೀದಿಸಿ, ನಾಟಿ ಕೋಳಿಗಳೆಂದು ₹ 300ಕ್ಕೆ ಮಾರಾಟ ಮಾಡಿ ವಂಚಿಸಲಾಗುತ್ತಿದೆ. ಸಾಲ ಮಾಡಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿರುವವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಾಟಿ ಕೋಳಿ ಸಾಕಾಣಿಕೆದಾರರಾದ ರಾಜೇಶ್, ಮನೋಹರ್, ಸಂದೀಪ್, ಪ್ರಶಾಂತ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.