ಕಿಕ್ಕೇರಿ: ಮದ್ಯವ್ಯಸನ ಬಿಟ್ಟು ನವಜೀವನಕ್ಕೆ ಕಾಲಿಟ್ಟಿರುವ ಬದುಕು ಹಸನಾಗಿರಲಿ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್ಟಿಒ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮೇಶ್ವರ ದೇಗುಲ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ’ನವಜೀವನೋತ್ಸವ ಹಾಗೂ ಬ್ರಹ್ಮೇಶ್ವರಸ್ವಾಮಿ’ಗೆ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಸ್ಥೆಯ ಮದ್ಯವರ್ಜನೆ ಶಿಬಿರ ಹಮ್ಮಿಕೊಂಡು ಯೋಗ, ಧ್ಯಾನ, ಭಜನೆಗಳಿಂದ ಮನಪರಿವರ್ತಿಸಿ ಹೊಸಮನುಷ್ಯರನ್ನಾಗಿ ಮಾಡುತ್ತಿದೆ’ ಎಂದರು.

ಸಾಹಿತಿ ಮಾರೇನಹಳ್ಳಿ ಲೋಕೇಶ್ ನವಜೀವನೋತ್ಸವಕ್ಕೆ ಕಾಲಿಟ್ಟವರಿಗೆ ಕವಿತೆ ಮೂಲಕ ವಿಶೇಷ ಉಪನ್ಯಾಸ ನೀಡಿದರು.

ಯೋಜನೆ ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಮಾತನಾಡಿದರು. ಕಿಕ್ಕೇರಿ ಯೋಜನಾಧಿಕಾರಿ ಪ್ರಸಾದ್ ಮಾತನಾಡಿ, ಮದ್ಯವರ್ಜಿಸಿದ ನವಜೀವನದಾರರಿಗೆ ಸಂಸ್ಥೆ ಸದಾ ಮಾರ್ಗದರ್ಶಕರಾಗಿ ನಿಲ್ಲುವುದಾಗಿ ನುಡಿದರು.

ಶಿಬಿರದಿಂದ ಮದ್ಯವರ್ಜಿಸಿದ ಹತ್ತಾರು ಮಂದಿ ಕುಡಿತದಿಂದ ಹಾಳಾಗಿದ್ದ ತಮ್ಮ ಬದುಕಿನ ಚಿತ್ರಣ ತಿಳಿಸಿಕೊಟ್ಟರು.

ಬ್ರಹ್ಮೇಶ್ವರಸ್ವಾಮಿಗೆ ಬಿಲ್ವಾರ್ಚನೆ, ಅನ್ನಪ್ರಸಾದ ಏರ್ಪಡಿಸಲಾಗಿತ್ತು. ವಿವಿಧ ಕ್ರೀಡೆಯಲ್ಲಿ ವಿಜೇತರಾದ ನವಜೀವನದಾರಿಗಳಿಗೆ ಬಹುಮಾನ ವಿತರಿಸಲಾಯಿತು.

ಜನಜಾಗೃತಿ ವೇದಿಕೆ ಮೈಸೂರು ಪ್ರಾದೇಶಿಕ ಯೋಜನಾಧಿಕಾರಿ ಮುಖೇಶ್, ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನಳಿನಿ, ಸಾಹಿತಿ ಮಾರೇನಹಳ್ಳಿ ಲೋಕೇಶ್, ಸದಸ್ಯರಾದ ಸುನೀತಾ, ಮೊಟ್ಟೆ ಮಂಜು, ಶಿವರಾಂ, ಕುಮಾರ್, ರಂಗೇಗೌಡ, ವಿಮಲಾ, ಮಣಿ, ಮೇಲ್ವಿಚಾರಿಕೆ ಯಶೋಧಾ, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.