ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲಗೂರು | ಆಮೆ ಬೇಟೆ: ಏಳು ಜನರ ಬಂಧನ

Published : 6 ಆಗಸ್ಟ್ 2024, 14:21 IST
Last Updated : 6 ಆಗಸ್ಟ್ 2024, 14:21 IST
ಫಾಲೋ ಮಾಡಿ
Comments

ಹಲಗೂರು: ಅರಣ್ಯ ಪ್ರದೇಶದಲ್ಲಿ ಆಮೆಗಳನ್ನು ಬೇಟೆಯಾಡಿದ ಆರೋಪದಡಿ ಕಾವೇರಿ ವನ್ಯಜೀವಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಏಳು ಜನರನ್ನು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಸೈಯದ್ ಶುಜಾತುಲ್ಲಾ, ಅಸಿಫ್ ಖಾನ್, ತಬ್ರೇಜ್, ಬಸೀರ್ ಖಾನ್, ಅಬ್ದುಲ್ ಖದೀರ್ ಖಾನ್, ಪೈಜಲ್ ಕಜಾನ್, ಅರ್ಫತ್ ಬಂಧಿತರು.

ಶಿಂಷಾ ಉಪ ವಲಯ ವ್ಯಾಪ್ತಿಯಲ್ಲಿರುವ ದಬ್ಬಳ್ಳಿ ಅರಣ್ಯ ವ್ಯಾಪ್ತಿಯ ಸರಹದ್ದಿನಲ್ಲಿ ಅಧಿಕಾರಿಗಳು ಭಾನುವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ ತಡರಾತ್ರಿ 11 ಗಂಟೆಯ ವೇಳೆ ಮಾರುತಿ ಕಾರು ನಿಂತಿರುವುದನ್ನು ನೋಡಿ ಜಾಗೃತರಾದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡಿದಾಗ ದಬ್ಬಹಳ್ಳಿ ವ್ಯಾಪ್ತಿಯ 'ಉಳ್ಳಬಳ್ಳ' ಅರಣ್ಯ ಪ್ರದೇಶದಲ್ಲಿ ಬ್ಯಾಟರಿ ಬೆಳಕು ಕಾಣಿಸಿದೆ.

ಬೆಳಕು ಬರುತ್ತಿದ್ದ ಜಾಗವನ್ನು ಸುತ್ತುವರಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೀನು ಹಿಡಿಯಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ.

ಒಂದು ಜೀವಂತ ಆಮೆ, ಏಳು ಮೊಬೈಲ್ ಪೋನ್‌ಗಳು, 6 ಪಿಷ್ ಕ್ಯಾಚಿಂಗ್ ರಾಡ್ ಮತ್ತು ಮಾರುತಿ ಸುಜುಕಿ ಆಮ್ನಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಚರಣೆಯಲ್ಲಿ ಶಿಂಷಾ ಉಪ ವಲಯ ಅರಣ್ಯ ಅಧಿಕಾರಿ ಸಿದ್ದರಾಮ ಪೂಜಾರಿ, ಅರಣ್ಯ ಪಾಲಕರಾದ ಮಲ್ಲಿಕಾರ್ಜುನ ಕುಂಬಾರ, ಜೀಪ್ ಚಾಲಕ ಚೇತನ್, ಗಸ್ತು ಸಿಬ್ಬಂದಿ ಎನ್.ಶಿವು, ಬಸವರಾಜು ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT