ಭಾರತೀನಗರ: ‘ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದ್ದಲ್ಲಿ ಸಂಸ್ಕಾರ ಬರುತ್ತದೆ’ ಎಂದು ಬೆಂಗಳೂರು ವಿ.ವಿ ನಿಕಟ ಪೂರ್ವ ಕುಲಸಚಿವ ಪ್ರೊ.ಕೆ.ಎನ್.ನಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಅಣ್ಣೂರು ಗೇಟ್ನ ಜ್ಞಾನಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ‘ಗಂಧದಗುಡಿ’ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣಕ್ಕೂ ಸಂಸ್ಕಾರಕ್ಕೂ ಬಹಳ ವ್ಯತ್ಯಾಸವಿದೆ. ಮಕ್ಕಳಿಗೆ ಶಿಕ್ಷಣವೂ ಅಗತ್ಯ, ಶಿಕ್ಷಣಕ್ಕಿಂತ ಹೆಚ್ಚು ಸಂಸ್ಕಾರವು ಅಗತ್ಯ’ ಎಂದು ಹೇಳಿದರು.

ಜ್ಞಾನಗಂಗೋತ್ರಿ ಪಬ್ಲಿಕ್ ಶಾಲೆಯ ಗೌರವಾಧ್ಯಕ್ಷ ಈರೇಗೌಡ ಮಾತನಾಡಿದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾಲೆ ಅಧ್ಯಕ್ಷ ಎಂ.ಇ.ಪ್ರತಾಪ್, ಪ್ರಮುಖ ಸಲಹೆಗಾರ ಚಂದ್ರಪ್ಪ, ಕಾರ್ಯದರ್ಶಿ ಎಂ.ಇ.ಪವಿತ್ರಾ, ಖಜಾಂಚಿ ವೇದಶ್ರೀ, ಮುಖ್ಯ ಶಿಕ್ಷಕ ಗಿರೀಶ್, ಸಿಆರ್ಪಿ ನಂದೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.