ಶುಕ್ರವಾರ, ಅಕ್ಟೋಬರ್ 23, 2020
21 °C

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಗಣಂಗೂರು ಬಳಿ ಶುಕ್ರವಾರ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.
ಮಂಡ್ಯ ತಾಲ್ಲೂಕು ಉಮ್ಮಡಹಳ್ಳಿ ಗ್ರಾಮದ ದಿವಂಗತ ಶ್ರೀನಿವಾಸಯ್ಯ ಅವರ ಮಗ ಯು.ಎಸ್‌. ಪೂರ್ಣಚಂದ್ರ (28) ಹತ್ಯೆಯಾದ ಯುವಕ.

ಕೀರ್ತಿರಾಜ್‌ ಎಂಬುವರಿಗೆ ಸೇರಿದ ’ಆತ್ಮಾನಂದ ಸ್ಟೋನ್‌ ಕ್ರಷರ್‌’ನಲ್ಲಿ ರಾತ್ರಿ ಈ ಕೃತ್ಯ ನಡೆದಿದೆ. ಪೂರ್ಣಚಂದ್ರ ಊಟ ಮಾಡುತ್ತಿದ್ದ ವೇಳೆ ಐದಾರು ಜನರ ಗುಂಪು ದಾಳಿ ನಡೆಸಿ ತಲೆ, ಕತ್ತು, ಹೊಟ್ಟೆಯ ಭಾಗಕ್ಕೆ ಮಚ್ಚಿನಿಂದ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಹಲ್ಲೆ ತಡೆಯಲು ಮುಂದಾದ ಜಕ್ಕನಹಳ್ಳಿ ಗ್ರಾಮದ ಪವನ್‌ ಎಂಬಾತ ಬಲ ತೊಡೆಗೆ ಮಚ್ಚಿನ ಏಟು ಬಿದ್ದಿದೆ. ಜತೆಯಲ್ಲಿದ್ದ ಚಾಮರಾಜ, ನಂಜುಂಡ ಮತ್ತು ರಾಜೇಶ್‌ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಕೆ. ಪರಶುರಾಂ, ಡಿವೈಎಸ್ಪಿ ಅರುಣ್‌ ನಾಗೇಗೌಡ, ಸಿಪಿಐ ಡಿ. ಯೋಗೇಶ್‌, ಎಸ್‌ಐ ಗಿರೀಶ್‌ ಭೇಟಿ ನೀಡಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಪೂರ್ಣಚಂದ್ರ ಹತ್ತು ವರ್ಷಗಳಿಂದ ಜಕ್ಕನಹಳ್ಳಿಯ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದು,
ಜಲ್ಲಿ ಕ್ರಷರ್‌ನಲ್ಲಿ ರೈಟರ್‌ ಕೆಲಸ ಮಾಡಿಕೊಂಡಿದ್ದ. ಕಲ್ಲಿನ ಪುಡಿ ತುಂಬುವ ವಿಷಯಕ್ಕೆ ಕೆಲವರೊಂದಿಗೆ ಗಲಾಟೆ ಆಗಿತ್ತು. ಇದೇ ವಿಷಯಕ್ಕೆ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.