ಭಾರತೀನಗರ: ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕಾದಲ್ಲಿ ಸದಸ್ಯರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದು ಅಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ತಿಳಿಸಿದರು.

ಅಣ್ಣೂರು ಗ್ರಾಮದ ಎಂಪಿಸಿಎಸ್‌ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ರೈತರು ವ್ಯವಸಾಯದ ಜೊತೆಗೆ ರೇಷ್ಮೆ, ಕುರಿ, ಹಸು ಸಾಕಾಣಿಕೆ ಸೇರಿದಂತೆ ಇತರ ಉಪ ಕಸುಬುಗಳನ್ನು ಮಾಡಬೇಕು. ಇದರಿಂದ ರೈತರು ಅರ್ಥಿಕವಾಗಿ ಮುಂದೆ ಬರಬಹುದು ಎಂದರು.

ಮನ್‌ಮುಲ್ ನಿರ್ದೇಶಕ ಎ.ಸಿ.ಸತೀಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಸ್ವಾಮಿ, ಮುಖಂಡರಾದ ಪುಟ್ಟಲಿಂಗೇಗೌಡ, ಎಸ್.ಕೃಷ್ಣಪ್ಪ, ನಿರ್ದೇಶಕರಾದ ಶಿವಲಿಂಗೇಗೌಡ, ಚನ್ನಪ್ಪ, ಮಹದೇವು, ರೇವಣ್ಣ, ಭಾರತೀ, ಲೊಕೇಶ್, ರಾಜು, ಕಾರ್ಯದರ್ಶಿ ಜವರಾಯಿಗೌಡ, ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.