ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಗಾಮಿಯಾಗಿ ಕೋಮುವಾದ ಅಳಿಸಿ ಹಾಕಿ’

ರೈತ ನಾಯಕಿ ಸುನಂದಾ ಜಯರಾಮ್ ಮನವಿ
Last Updated 23 ಜೂನ್ 2019, 15:42 IST
ಅಕ್ಷರ ಗಾತ್ರ

ಮೈಸೂರು: ‘ಕೋಮುವಾದ–ಕೋಮುವಾದಿಗಳನ್ನು ಅಂತರ್ಗಾಮಿಗಳಾಗಿ ಅಳಿಸಿ ಹಾಕಬೇಕಿದೆ’ ಎಂದು ರೈತ ನಾಯಕಿ ಸುನಂದಾ ಜಯರಾಮ್ ಹೇಳಿದರು.

ದೇಸಿರಂಗ ಸಂಸ್ಥೆ ನಗರದ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪ್ರೊ.ಕೆ.ರಾಮದಾಸ್‌ ನೆನಪಿನಲಿ’ ಸಮಾರಂಭದಲ್ಲಿ ‘ಕೋಮು ಸೌಹಾರ್ದತೆ ಒಂದು ಚಿಂತನೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಇಂದಿನ ರಾಜಕಾರಣದ ಶುದ್ಧೀಕರಣ ಮತದಾರರಿಂದ ಆಗಬೇಕಿದೆ. ಆದರೆ ಮತದಾರರ ಮೆದುಳಿಗೆ ಏನಾಗಿದೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಮೌಢ್ಯ ಮಿತಿ ಮೀರಿದೆ. ವಿಧಾನಸೌಧವನ್ನು ಇದು ಬಿಟ್ಟಿಲ್ಲ. ಮುಂಭಾಗ ಬದಲಿಸುವುದನ್ನು ಹೊರತುಪಡಿಸಿ, ಒಳಭಾಗದಲ್ಲಿ ಎಲ್ಲವನ್ನೂ ಬದಲಿಸಲಾಗಿದೆ’ ಎಂದು ಸುನಂದಾ ಅಸಮಾಧಾನ ವ್ಯಕ್ತಪಡಿಸಿದರು.

‘ಚಳವಳಿಗಳು ಸತ್ತಿಲ್ಲ. ಸಾಯಲೂಬಾರದು. ಗೌರಿ, ಡಾ.ಎಂ.ಎಂ.ಕಲಬುರ್ಗಿ ಹತ್ಯೆಕೋರರಿಗೆ ಇದೂವರೆಗೂ ಶಿಕ್ಷೆಯಾಗಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಇದಕ್ಕಾಗಿ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಲನಚಿತ್ರ ನಟ ಮಂಡ್ಯ ರಮೇಶ್‌ ಮೂವರಿಗೆ ಲೇಖನ ಪ್ರಶಸ್ತಿ ವಿತರಿಸಿದರು. ಚಿಂತಕ ಪ.ಮಲ್ಲೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೇಸಿರಂಗ ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಜನಮನ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರೊ.ಶಿವಸ್ವಾಮಿ, ಪ್ರೊ.ಚಂದ್ರಶೇಖರ ತುಬಾರ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಪ್ರೊ.ತಿಮ್ಮರಾಜು, ಪ್ರೊ.ಎಂ.ನಂಜುಂಡಯ್ಯ, ಅನಂತನಾಗ್, ಮೈಸೂರು ಉಮೇಶ್‌ ಪ್ರೊ.ಕೆ.ರಾಮದಾಸ್‌ ಜತೆಗಿನ ಒಡನಾಟ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT