ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕೆಲ್ಲಹಳ್ಳಿಯ 4 ವರ್ಷದ ಬಾಲಕನಿಗೆ ಮಿದುಳು ಜ್ವರ

Last Updated 12 ಆಗಸ್ಟ್ 2021, 5:15 IST
ಅಕ್ಷರ ಗಾತ್ರ

ಜಯಪುರ (ಮೈಸೂರು ಜಿಲ್ಲೆ): ಹೋಬಳಿಯ ಕೆಲ್ಲಹಳ್ಳಿಯ 4 ವರ್ಷದ ಬಾಲಕನಿಗೆ ಮಿದುಳು ಜ್ವರ (ಜಫಾನೀಸ್ ಬಿ ಎನ್‌ಕೆಫಾಲೆಟಿಸ್‌)ಇರುವುದು ಪತ್ತೆಯಾಗಿದೆ. 2 ವರ್ಷದ ಹಿಂದೆ ಈ ಬಗೆಯ ಜ್ವರ ಜಿಲ್ಲೆಯಲ್ಲಿ ಕಂಡು ಬಂದಿತ್ತು.

ತೀವ್ರ ಜ್ವರದಿಂದ ಬಳಲುತ್ತಿರುವ ಬಾಲಕನನ್ನು ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಈಚೆಗೆ ಜ್ವರದಿಂದ ಬಳಲಿದವರ ರಕ್ತದ ಮಾದರಿಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ‘ಮಿದುಳು ಜ್ವರ ಪತ್ತೆಯಾಗಿದೆ. ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಿದುಳು ಜ್ವರದ 23 ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆಯಿಂದ ಹರಡುವ ‘ಜಫಾನಿಸ್ ಬಿ ಎನ್‌ಕೆಫಾಲೆಟಿಸ್‌’ ಪ್ರಕರಣ ಕೆಲ್ಲಹಳ್ಳಿ ಕಂಡುಬಂದಿದೆ. ರೋಗ ಇರುವ ವೈರಸ್‌ ಅನ್ನು ಸೊಳ್ಳೆಯು ಮನುಷ್ಯನಿಂದ ಹಂದಿಗೆ ಮೊದಲು ರವಾನಿಸುತ್ತದೆ. ಹಂದಿಯಲ್ಲಿ ಬೆಳವಣಿಗೆಯಾದ ಅದೇ ವೈರಸ್‌ ಮತ್ತೆ ಸೊಳ್ಳೆಯಿಂದ ಮನುಷ್ಯನಿಗೆ ಹರಡುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT