ಶನಿವಾರ, ಆಗಸ್ಟ್ 13, 2022
24 °C

ಕುವೆಂಪು ನಗರದಲ್ಲಿ ಹೆಬ್ಬಾವಿನ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಜನನಿಬಿಡ ಪ್ರದೇಶವಾದ ಕುವೆಂಪು ನಗರದಲ್ಲಿ ಶನಿವಾರ ರಾತ್ರಿ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಸೆರೆ ಹಿಡಿಯಲಾಗಿದೆ.

ಕುವೆಂಪು ನಗರದ ಎಂ ಬ್ಲಾಕ್‌ ಸಮೀಪದಲ್ಲಿರುವ ಪಂಚಮಂತ್ರ ರಸ್ತೆ ಬದಿ ಅಂದಾಜು 7ರಿಂದ 8 ಅಡಿಗಳಷ್ಟು ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ಸ್ನೇಕ್ ಶ್ಯಾಮ್‌ಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಮ್, ರಸ್ತೆ ಪಕ್ಕದ ಗಿಡಗಳ ಮಧ್ಯದಲ್ಲಿ ಅಡಗಿದ್ದ ಹೆಬ್ಬಾವನ್ನು ಸೆರೆ ಹಿಡಿದರು. ಈ ಕಾರ್ಯಾಚರಣೆಯಲ್ಲಿ ಶ್ಯಾಮ್‌ ಪುತ್ರ ಸೂರ್ಯ ಸಹ ಸಾಥ್ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು