ಭಾನುವಾರ, ಜನವರಿ 19, 2020
27 °C

ಹುಣಸೂರು: ಬಿಳಿಕೆರೆ ಸಮೀಪ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹುಣಸೂರು ತಾಲ್ಲೂಕಿನ ಹುಲ್ಲೇನಹಳ್ಳಿ‌ ಪೆಟ್ರೊಲ್ ಬಂಕ್ ಸಮೀಪ ಶಿಫ್ಟ್ ಡಿಸೈರ್ ಕಾರು ಮತ್ತು ಇನ್ನೋವಾ ಕಾರಿನ ಮಧ್ಯೆ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಣಸೂರಿನಿಂದ‌ ಮೈಸೂರು ಕಡೆಗೆ ಹೋಗುತ್ತಿದ್ದ ಶಿಫ್ಟ್ ಡಿಸೈರ್ ಕಾರು ಅತಿ ವೇಗದಲ್ಲಿ ರಸ್ತೆ‌ ವಿಭಜಕವನ್ನು ಹಾರಿ ಮೈಸೂರು ಕಡೆಯಿಂದ ಹುಣಸೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ‌ಹೊಡೆದಿದೆ.

ಅಪಘಾತದಲ್ಲಿ ಕೇರಳದ ಲಿಲ್ಲಿಕುಟ್ಟಿ‌(54) ಹಾಗೂ ಮ್ಯಾಥ್ಯೂ (58) ಮೃತಪಟ್ಟವರು. ಗಾಯಗೊಂಡವರ‌‌ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ‌ ಬಿಳಿಕೆರೆ ಠಾಣೆಯ ಪೊಲೀಸರು ತೆರಳಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು