ಗುರುವಾರ , ಆಗಸ್ಟ್ 5, 2021
28 °C
ಪರಿಹಾರವಾಗಿ ₹ 4.34 ಕೋಟಿ ನೀಡಲು ಆದೇಶ

ಚೆಕ್‌ ಬೌನ್ಸ್‌: ₹ 4.33 ಕೋಟಿ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಚೆಕ್‌ಬೌನ್ಸ್‌ನ ಮೂರು ಪ್ರಕರಣಗಳಲ್ಲಿ ಇಲ್ಲಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಪ್ರದೀಪ್‌ಕುಮಾರ್ ಎಂಬುವವರಿಗೆ 4ನೇ ಜೆಎಂಎಫ್‌ಸಿ ನ್ಯಾಯಾಲಯವು ₹ 4.33 ಕೋಟಿ ದಂಡ ವಿಧಿಸಿದೆ. ಇದರೊಂದಿಗೆ ಪರಿಹಾರವಾಗಿ ₹ 4.34 ಕೋಟಿ ನೀಡಬೇಕು ಎಂದು ಆದೇಶಿಸಿದೆ.

ಇಲವಾಲದ ಮಾದಗಳ್ಳಿ ಗ್ರಾಮದ ಬಿ.ಭೈರಪ್ಪ ಅವರ ನಾಲ್ಕು ಎಕರೆ ಭೂಮಿಯನ್ನು ಖರೀದಿಸುವಾಗ ನಾರಾಯಣಗೌಡ ಹಾಗೂ ಪ್ರದೀಪ್‌ಕುಮಾರ್ ಮನೆ ನಿರ್ಮಿಸಿಕೊಡುವುದಾಗಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಇದಕ್ಕಾಗಿ ಅವರು ಭದ್ರತೆಯಾಗಿ ₹ 1.97 ಕೋಟಿ ಮೊತ್ತದ ಎರಡು ಚೆಕ್‌ಗಳು ಹಾಗೂ ₹ 1.69 ಲಕ್ಷ ಮೊತ್ತದ ಒಂದು ಚೆಕ್‌ ಕೊಟ್ಟಿದ್ದರು. ಆದರೆ, ಮನೆ ನಿರ್ಮಿಸಿಕೊಟ್ಟಿರಲಿಲ್ಲ. ಚೆಕ್‌ ಸಹ ಬೌನ್ಸ್‌ ಆಗಿತ್ತು.

ಇವರ ವಿರುದ್ಧ ಭೈರಪ್ಪ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜೀವ ಗೋಳಸಾರ, ದಂಡ ವಿಧಿಸಿ ಆದೇಶಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು