ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ‘ಪಾಲಿಕೆ ನಡೆ ಜನತೆ ಕಡೆ’ಗೆ ಚಾಲನೆ

ಆಸ್ತಿ ತೆರಿಗೆ ಸಂಗ್ರಹ–ಮೈಸೂರು ಅಭಿವೃದ್ಧಿಗೆ ಕೈಜೋಡಿಸಿ: ಜಿ.ಟಿ.ದೇವೇಗೌಡ
Last Updated 4 ಅಕ್ಟೋಬರ್ 2020, 3:07 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರದ ಅಭಿವೃದ್ಧಿಗಾಗಿ ಆಸ್ತಿ ತೆರಿಗೆ ಪಾವತಿಸುವುದು ಅವಶ್ಯಕವಾಗಿದೆ. ಸರಿಯಾದ ಸಮಯಕ್ಕೆ ಪಾವತಿಸಿ ಅಭಿವೃದ್ಧಿಗೆ ಕೈಜೋಡಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

ಸಂಪನ್ಮೂಲ ಕ್ರೋಡೀಕರಿಸುವ ನಿಟ್ಟಿನಲ್ಲಿ ಪಾಲಿಕೆ ವಲಯ ಕಚೇರಿ–3 ವ್ಯಾಪ್ತಿಯ ವಾರ್ಡ್ ಸಂಖ್ಯೆ 58ರಲ್ಲಿ ಶನಿವಾರ ಆಯೋಜಿಸಿದ್ದ ‘ಪಾಲಿಕೆ ನಡೆ ಜನತೆ ಕಡೆ’ ಆಸ್ತಿ ತೆರಿಗೆ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ ಹಲವೆಡೆ ಒಳಚರಂಡಿ ನಿರ್ಮಾಣವಾಗಿಲ್ಲ. ಖಾಲಿ ನಿವೇಶನಗಳಲ್ಲಿ ಗಿಡಗಳು ಬೆಳೆದಿದ್ದು, ಸ್ವಚ್ಛತೆಯೇ ಇಲ್ಲ. ಉದ್ಯಾನ ಅಭಿವೃದ್ಧಿ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ತೆರಿಗೆ ಪಾವತಿಸಿ, ಕುಂದು ಕೊರತೆ ಸರಿಪಡಿಸಿಕೊಳ್ಳಿ ಎಂದರು.

ಪಾಲಿಕೆಗೆ ಆಸ್ತಿ ತೆರಿಗೆಯೇ ಮೂಲ ಆರ್ಥಿಕ ಸಂಪನ್ಮೂಲವಾಗಿದ್ದು, ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಆಸ್ತಿ ಮಾಲೀಕರು, ಅನುಬೋಗದಾರರು ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಆಸ್ತಿ ತೆರಿಗೆ ಪಾವತಿಸಲು ಅ.31ರ ವರೆಗೆ ಕಾಲಾವಕಾಶ ನೀಡಲಾಗಿದೆ. ನವೆಂಬರ್‌ನಲ್ಲಿ ಪಾವತಿಸುವ ತೆರಿಗೆದಾರರು ದಂಡ ನೀಡಬೇಕಾಗುತ್ತದೆ ಎಂದರು.

ವಲಯ ಕಚೇರಿ–3 ವ್ಯಾಪ್ತಿಯಲ್ಲಿ ಒಟ್ಟು 29,876 ಆಸ್ತಿಗಳಿರುತ್ತವೆ. ಪ್ರಸಕ್ತ 2020–21 ನೇ ಸಾಲಿಗೆ ಒಟ್ಟು 15,902 ಆಸ್ತಿಗಳಿಂದ ₹ 10.25 ಕೋಟಿ ಹಾಗೂ 2019–20 ರವರೆಗಿನ 4,127 ಬಾಕಿ ಪ್ರಕರಣಗಳಿಂದ ₹ 2.89 ಕೋಟಿ ಸೇರಿ ಒಟ್ಟು ₹ 13.75 ಕೋಟಿ ವಸೂಲಾಗಿದೆ. ಬಾಕಿ 13,984 ಆಸ್ತಿಗಳಿಂದ ₹ 11.62 ಕೋಟಿ ವಸೂಲಾತಿ ಆಗಬೇಕಾಗಿದೆ.

ವಲಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 3,861 ನಿವೇಶನಗಳಿವೆ. ಕೆಲ ಮಾಲೀಕರು ಹೊರರಾಜ್ಯದಲ್ಲಿ ನೆಲೆಸಿದ್ದು, ಅವರು ಕಂದಾಯ ಪಾವತಿಸಲು ಅನುಕೂಲವಾಗುವಂತೆ ಮೂರು ತಿಂಗಳು ಸಾರ್ವತ್ರಿಕ ರಜಾ ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು

ಪಾಲಿಕೆ ಸದಸ್ಯ ಶರತ್‌ ಕುಮಾರ್, ಪಾಲಿಕೆ ಅಧಿಕಾರಿಗಳಾದ ಶಶಿಕುಮಾರ್‌, ಸತ್ಯಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT