ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರನ ಜತೆಯಲ್ಲಿದ್ದ ಇಬ್ಬರಿಗೆ ಕೋವಿಡ್–19

ಮೈಸೂರು ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 21ಕ್ಕೇರಿಕೆ
Last Updated 3 ಏಪ್ರಿಲ್ 2020, 10:30 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡಿನ ಔಷಧ ಕಾರ್ಖಾನೆಯ ನೌಕರನ ಜತೆಯಲ್ಲಿದ್ದ ಇಬ್ಬರಿಗೆ ಮಂಗಳವಾರ ಕೋವಿಡ್–19 ದೃಢಪಟ್ಟಿದೆ.

ಇದರಿಂದ ಕೋವಿಡ್‌–19 ಪೀಡಿತ ರೋಗಿಗಳ ಸಂಖ್ಯೆ ಜಿಲ್ಲೆಯಲ್ಲಿ 21ಕ್ಕೇರಿದಂತಾಗಿದೆ. ದಿನೇ ದಿನೇ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲೆಯ ಜನರು ಸೇರಿದಂತೆ ಔಷಧ ಕಾರ್ಖಾನೆಯ ನೌಕರರು, ಅವರ ಕುಟುಂಬ ವರ್ಗದಲ್ಲೂ, ಸಂಬಂಧಿಕರಲ್ಲೂ ಆತಂಕ ಹೆಚ್ಚಿಸುತ್ತಿದೆ.

ಮಾರ್ಚ್‌ 30ರಂದು ಕೋವಿಡ್–19 ದೃಢಪಟ್ಟಿದ್ದ ಕಾರ್ಖಾನೆಯ ನೌಕರನ (ರೋಗಿ ಸಂಖ್ಯೆ 88) ಜತೆಯಲ್ಲಿ ವಾಸವಿದ್ದ 24 ಹಾಗೂ 22 ವರ್ಷದ ಯುವಕರಿಬ್ಬರೂ ಮಂಗಳವಾರ ಕೋವಿಡ್ ಪೀಡಿತರಾಗಿರುವುದು ಖಚಿತಪಟ್ಟಿದೆ.

ಕೋವಿಡ್‌ ಪೀಡಿತ ಕಾರ್ಖಾನೆಯ ನೌಕರ ನಂಜನಗೂಡಿನ ನಿವಾಸಿ ಎಂದು ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮೂಲಕ ಬಿಡುಗಡೆ ಮಾಡಿದ್ದ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಿತ್ತು.

ಮಂಗಳವಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ಹೊಸ ರೋಗಿಗಳಿಬ್ಬರು ಮೈಸೂರು ವಾಸಿಗಳು, ರೋಗಿ ಸಂಖ್ಯೆ 88ರ ಜತೆಯಲ್ಲಿ ವಾಸವಿದ್ದರು ಎಂದು ನಮೂದಿಸಿದೆ. ಇದು ಜನರಲ್ಲಿ ಗೊಂದಲ ಸೃಷ್ಟಿಸಿದೆ.

‌ಹೊಸದಾಗಿ ಕೋವಿಡ್‌–19 ಪೀಡಿತರ ಪಟ್ಟಿಗೆ ಸೇರ್ಪಡೆಗೊಂಡವರು ನಂಜನಗೂಡಿನ ಔಷಧ ಕಾರ್ಖಾನೆಯ ನೌಕರರೋ ಅಥವಾ ಈಗಾಗಲೇ ಕೋವಿಡ್ ಪೀಡಿತನಾದ ನೌಕರನ ಗೆಳೆಯರೋ, ಸಂಬಂಧಿಗಳೋ ಎಂಬುದು ಸ್ಪಷ್ಟವಾಗದಾಗಿದೆ. ಈ ಕುರಿತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಲಭ್ಯವಾಗಲಿಲ್ಲ. ಸಂಪರ್ಕಕ್ಕೆ ಸಿಕ್ಕ ಅಧಿಕಾರಿಗಳು ಸಹ ಗೊಂದಲ ಪರಿಹರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT