ಶುಕ್ರವಾರ, ಅಕ್ಟೋಬರ್ 23, 2020
27 °C

ಹುಣಸೂರು: ವನ್ಯಜೀವಿ ಸಂರಕ್ಷಣೆ ಜಾಗೃತಿಗೆ ಸೈಕಲ್ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ರಣಹದ್ದುಗಳು ಭವಿಷ್ಯಕ್ಕಾಗಿ ಜಾಥಾ ಮತ್ತು ಅರಿವು ಸೈಕಲ್ ಜಾಥಾಕ್ಕೆ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಿದರು.

‘ರಾಜ್ಯದಾದ್ಯಂತ ಅ. 2ರಿಂದ 8ರವರಗೆ ನಡೆಯಲಿರುವ ಸಪ್ತಾಹದಲ್ಲಿ ಆನೆ ಚಲನವಲನ ಪಥ ಸಂರಕ್ಷಣೆ ವಿಷಯವನ್ನು ಕೇಂದ್ರೀಕೃತವಾಗಿ ಅರಣ್ಯದಂಚಿನ ನಾಗರಿಕರಲ್ಲಿ ಅರಿವು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮುತ್ತೋಡಿಯಿಂದ ಬೆಂಗಳೂರುವರೆಗೆ ಸೈಕಲ್ ಜಾಥಾ ನಡೆದಿದೆ’ ಎಂದರು.

ಜಾಥಾ ಅ.  4ರಂದು ನಾಗರಹೊಳೆ ತಲುಪಿ, ಅ.  5ರಂದು ಮೈಸೂರು ಮಾರ್ಗವಾಗಿ ಬೆಂಗಳೂರಿನತ್ತ ತೆರಳಿತು.

ಆನ್ ಲೈನ್ ಸ್ಪರ್ಧೆ: ಅರಣ್ಯದಲ್ಲಿ ವಿವಿಧ ಸೂಕ್ಷ್ಮ ಪ್ರಾಣಿ ಪಕ್ಷಿಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ವಿವಿಧ ರೀತಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಆನ್ ಲೈನ್ ಮೂಲಕ ಸ್ಪರ್ಧೆ ಹಮ್ಮಿಕೊಂಡು ಜಾಗೃತಿ ಮೂಡಿಸುವ ದಿಕ್ಕಿನಲ್ಲಿ ಇಲಾಖೆ ಹೆಜ್ಜೆ ಹಾಕಿದೆ ಎಂದರು.

ಕಾರ್ಯಕ್ರಮದಲ್ಲಿ ಎಸಿಎಫ್, ಸತೀಶ್, ವೀರನಹೊಸಹಳ್ಳಿ ಆರ್.ಎಫ್.ಒ ರವೀಂದ್ರ ಮೇಟಿಕುಪ್ಪೆ ವನ್ಯಜೀವಿ ವಲಯದ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.