ಹುಣಸೂರು (ಮೈಸೂರು): ‘ನಿಗಮ–ಮಂಡಳಿ ಅಧ್ಯಕ್ಷರು ಇದೀಗ ಅಧಿಕಾರ ಅನುಭವಿಸುತ್ತಿರುವುದು ಯಾರಿಂದ ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ
ಎಚ್.ವಿಶ್ವನಾಥ್, ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿದ ನಿಗಮ–ಮಂಡಳಿ ಅಧ್ಯಕ್ಷರಿಗೆ ಶನಿವಾರ ಇಲ್ಲಿ ತಿರುಗೇಟು ನೀಡಿದರು.

‘ನಮ್ಮ ತ್ಯಾಗದಿಂದಲೇ ಇವರಿಗೆ ಅಧಿಕಾರ ಸಿಕ್ಕಿರುವುದು; ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿರುವುದು. ಬಾಯಿಗೆ ಬಂದಂತೆ ಮಾತನಾಡಬಾರದು. ರಾಜ್ಯ ಉಸ್ತುವಾರಿ ಜೊತೆ ಮಾತನಾಡಿದ್ದನ್ನೇ ನಾನು ಮಾಧ್ಯಮದವರ ಬಳಿ ಹೇಳಿದ್ದೇನಷ್ಟೆ’ ಎಂದು ತಮ್ಮನ್ನು ಭೇಟಿಯಾದಮಾಧ್ಯಮದವರಿಗೆಪ್ರತಿಕ್ರಿಯಿಸಿದರು.

‘ಅಳಿಯನ ವಿಷಯದಲ್ಲಿ ಯಾವುದೇ ಲಾಬಿ ಮಾಡಿಲ್ಲ. ಚೀಫ್ ಎಂಜಿನಿಯರ್ ಆಗಿದ್ದ ಅಳಿಯನನ್ನು ವರ್ಗಾವಣೆ ಮಾಡಿದ ಸರ್ಕಾರ, 10 ತಿಂಗಳಿಂದ ಪರ್ಯಾಯ ಸ್ಥಳ ತೋರಿಸದೆ ಮನೆಯಲ್ಲೇ ಉಳಿಯುವಂತೆ ಮಾಡಿದೆ. ಈ ಬಗ್ಗೆ ಪ್ರಶ್ನಿಸುವುದರಲ್ಲಿ ತಪ್ಪೇನು? ಸರ್ಕಾರಿ ಅಧಿಕಾರಿಯನ್ನು ವರ್ಗ ಮಾಡುವ ಅಧಿಕಾರ ಸರ್ಕಾರಕ್ಕೆ ಇದ್ದ ಮೇಲೆ, ಪರ್ಯಾಯ ಸ್ಥಳ ನೀಡಬೇಕಾದ ಜವಾಬ್ದಾರಿಯೂ ಇದೆಯಲ್ಲವೇ? ಸರ್ಕಾರ ಈ ವಿಷಯದಲ್ಲಿ
ಎಡವಿದೆ’ ಎಂದು ವಿಶ್ವನಾಥ್ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.