ಶುಕ್ರವಾರ, ಆಗಸ್ಟ್ 6, 2021
25 °C

ಮಹಿಳೆಯಿಂದ ₹ 48 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಸಾತಗಳ್ಳಿ ಬಡಾವಣೆಯ ನಿವಾಸಿ ಹೇಮಲತಾ (48) ಎಂಬಾಕೆ ಸ್ಥಳೀಯ ನಿವಾಸಿಗಳಿಗೆ ಸುಮಾರು ₹ 48 ಲಕ್ಷ ವಂಚಿಸಿರುವ ಕುರಿತು ಇಲ್ಲಿನ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಳೆದ 4 ವರ್ಷಗಳಿಂದ ಇಲ್ಲಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಹಿಳೆಯು ದೇವರು, ಧರ್ಮದ ವಿಚಾರ ಹೇಳುತ್ತ ಸುತ್ತಮುತ್ತಲ ನಿವಾಸಿಗಳ ವಿಶ್ವಾಸ ಗಳಿಸಿದ್ದರು. ಚೀಟಿ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಕೆಲವರಿಂದ ಹಣ ಸಂಗ್ರಹಿಸಿದರೆ ಮತ್ತೆ ಕೆಲವರಿಂದ ಸಾಲವಾಗಿಯೂ ಹಣ ಪಡೆದಿದ್ದರು. ಇಲ್ಲಿಯವರೆಗೆ ಒಟ್ಟು ₹ 48 ಲಕ್ಷದಷ್ಟು ಹಣವನ್ನು ವಂಚಿಸಿರುವ ಕುರಿತು ಮಾಹಿತಿ ದೊರಕಿದೆ. ಪ್ರಕರಣ ದಾಖಲಾಗಿದ್ದು, ಮಹಿಳೆಗಾಗಿ ಶೋಧ ಕಾರ್ಯ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.