ಶನಿವಾರ, ಜೂಲೈ 11, 2020
22 °C

ಹಾಸಿಗೆಗೆ ಹೊತ್ತಿಕೊಂಡ ಬೆಂಕಿಯಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬೀಡಿ ಹಚ್ಚಲು ಬಳಸಿದ ಬೆಂಕಿಕಡ್ಡಿಯಿಂದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡು ಹೊಗೆಯಿಂದ ಉಸಿರುಗಟ್ಟಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಕೆ.ಟಿ.ಸ್ಟ್ರೀಟ್‌ನ ನಿವಾಸಿ ಸುರೇಶ್‌ (65) ಮೃತಪಟ್ಟವರು. ಇವರಿಗೆ ವಿಪರೀತ ಮದ್ಯಸೇವನೆ ಮತ್ತು ಬೀಡಿ ಸೇದುವ ಚಟವಿತ್ತು. ಇವರು ನಿತ್ಯ ಮದ್ಯ ಸೇವಿಸಿ ಮಲಗುತ್ತಿದ್ದರು. ಇದೇ ರೀತಿ ಮಲಗುವಾಗ ಬೀಡಿ ಹಚ್ಚಿ ಉರಿಯುತ್ತಿದ್ದ ಕಡ್ಡಿಯನ್ನು ಹಾಸಿಗೆಯ ಮೇಲೆಯೇ ಇಟ್ಟಿದ್ದಾರೆ. ಇದರಿಂದ ಬೆಂಕಿ ಹೊತ್ತಿಕೊಂಡು ಹೊಗೆ ಎದ್ದಿದೆ. ಎಲ್ಲ ಕಿಟಕಿಗಳನ್ನೂ ಮುಚ್ಚಿದ್ದರಿಂದ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಿಟಕಿಯ ಸಂದಿನಲ್ಲಿ ಹೊಗೆ ಬರುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಂದು ನೋಡುವಷ್ಟರಲ್ಲಿ ಸುರೇಶ್‌ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ; 10 ಮಂದಿ ಬಂಧನ

ಮೈಸೂರು: ಇಲ್ಲಿನ ರಾಮಾನುಜರಸ್ತೆಯ ಮನೆಯೊಂದರಲ್ಲಿ ಜೂಜಾಟವಾಡುತ್ತಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹ 20,700 ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.