ಮಂಗಳವಾರ, ಸೆಪ್ಟೆಂಬರ್ 27, 2022
27 °C

ಹಂಪಾಪುರ‌: ಬೋನಿಗೆ ಬಿದ್ದ 4 ವರ್ಷದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಾಪುರ‌(ಮೈಸೂರು ‌ಜಿಲ್ಲೆ): ಸಮೀಪದ ಚಿಕ್ಕೆರೆಯೂರು ಗ್ರಾಮದ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಶುಕ್ರವಾರ ಚಿರತೆ ಬಿದ್ದಿದೆ. ಗ್ರಾಮದ ಅನಂದ ಎಂಬುವವರ ಜಮೀನಿನಲ್ಲಿ ಬೋನಿಡಲಾಗಿತ್ತು. ಅದು ಗಂಡು‌ ಚಿರತೆ ಆಗಿದ್ದು, 4 ವರ್ಷ ವಯಸ್ಸಿನದ್ದು ಎನ್ನಲಾಗಿದೆ. 

ಚಿರತೆಯು ಬೋನಿಗೆ‌ ಬಿದ್ದಿರುವ ಮಾಹಿತಿಯನ್ನು ರೈತರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು.  ಸ್ಥಳಕ್ಕೆ ಬಂದ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಚಿರತೆಯ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

ಚಿರತೆ ಬೋನಿಗೆ ಬಿದ್ದಿರುವ ಸುದ್ದಿ ಹರಡುತ್ತಿದ್ದಂತೆಯೇ, ವೀಕ್ಷಿಸುವುದಕ್ಕಾಗಿಯೇ ಗ್ರಾಮಸ್ಥರು ತಂಡೋಪ ತಂಡವಾಗಿ ಬಂದಿದ್ದರು.

ಈ ಭಾಗದಲ್ಲಿ ಇನ್ನೂ ಹೆಚ್ಚಿನ ಚಿರತೆಗಳಿವೆ. ಹೀಗಾಗಿ, ಗ್ರಾಮದಲ್ಲಿ ಮತ್ತೊಂದು ಬೋನಿಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು