ಮೈಸೂರು: ಮೈಸೂರು ಅಥ್ಲೆಟಿಕ್ಸ್ ಕ್ಲಬ್, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆ.14ರ ಭಾನುವಾರ ಬೆಳಿಗ್ಗೆ 7ಕ್ಕೆ ಮೈಸೂರು ವಿಶ್ವವಿದ್ಯಾಲಯದ ಓವಲ್ ಮೈದಾನದಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ‘ಸ್ವಾತಂತ್ರ್ಯದ ಓಟ–75’ ಆಯೋಜಿಸಲಾಗಿದೆ.

ಡಿಸಿಪಿ ಪ್ರದೀಪ್ ಗುಂಟಿ ಉದ್ಘಾಟಿಸಲಿದ್ದಾರೆ. ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಅಧ್ಯಕ್ಷ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಮಾನ ವಿತರಣೆ ಬೆಳಿಗ್ಗೆ 9.15ಕ್ಕೆ ನಡೆಯಲಿದ್ದು, ಡಿಸಿಪಿ ಗೀತಾ ಪ್ರಸನ್ನ ಮತ್ತು ದಿ ಎಸ್ಟೇಟ್, ಯಂಗ್ ಐಸ್ಲ್ಯಾಂಡ್ ಹಾಗೂ ರೆಸಾರ್ಟ್ ಮಾಲೀಕ ಡಾ.ಎಂ.ಮಹೇಶ್ ಶೆಣೈ ಉಪಸ್ಥಿತರಿರಲಿದ್ದಾರೆ. ಅಂತರರಾಷ್ಟ್ರೀಯ ಕ್ರೀಡಾಪಟು ಆರ್ಯನ್ ಪ್ರಜ್ವಲ್ ಕಶ್ಯಪ್ ಅವರನ್ನು ಸನ್ಮಾನಿಸಲಾಗುವುದು.

ಮೂರು ವಿಭಾಗಗಳಲ್ಲಿ (ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ–ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ) ಓಟದ ಸ್ಪರ್ಧೆ ನಡೆಯಲಿದೆ. ಬಾಲಕಿಯರಿಗೆ 3 ಕಿ.ಮೀ., ಬಾಲಕರಿಗೆ 5 ಕಿ.ಮೀ. ಓಟ ನಿಗದಿಪಡಿಸಲಾಗಿದೆ.

ಮೂರೂ ವಿಭಾಗಗಳಲ್ಲೂ ಮೊದಲ ಬಹುಮಾನ ₹ 1,000, ದ್ವಿತೀಯ ಬಹುಮಾನ ₹ 750 ಹಾಗೂ ತೃತೀಯ ಬಹುಮಾನ ₹ 500 ಜೊತೆಗೆ ಪದಕ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಓಟ ಪೂರ್ಣಗೊಳಿಸುವ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು.

ಪ್ರವೇಶ ಉಚಿತ. ಆಸಕ್ತರು ತಮ್ಮ ಗುರುತಿನ ಚೀಟಿ ಅಥವಾ ಪ್ರಾಂಶುಪಾಲರಿಂದ ಪಡೆದ ಪತ್ರದೊಂದಿಗೆ ಆ.13ರ ಸಂಜೆ 4ರಿಂದ 7ರ ಒಳಗೆ ಓವಲ್ ಮೈದಾನದ ಲಯನ್ಸ್ ಹಾಲ್ಗೆ ಬಂದು ಹೆಸರು ನೋಂದಾಯಿಸಬೇಕು.

ಮಾಹಿತಿಗೆ 9448046667 (ಯೋಗೇಂದ್ರ), 9845231243 (ಮುರಳೀಧರ್), 9751971978 (ಜಿ.ಪ್ರಭಾಕರ್) ಸಂರ್ಕಿಸಬಹುದು ಎಂದು ಕ್ಲಬ್ ಕಾರ್ಯದರ್ಶಿ ಎಂ.ಯೋಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.