ಬುಧವಾರ, ಜೂನ್ 3, 2020
27 °C

ಟಿಪ್ಪು, ಗೋಡ್ಸೆ ಪಥ ಬಿಟ್ಟು ಗಾಂಧಿ ಪಥದ ಕಡೆ ಬನ್ನಿ: ವಸಂತಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಟಿಪ್ಪು ಪಥದಲ್ಲಿರುವವರು ಖಡ್ಗಗಳನ್ನು ಕೆಳಗಿಳಿಸಿ ಕುರಾನಿನ ಜತೆ ಹಾಗೂ ಗೋಡ್ಸೆ ಪಥದವರು ಪಿಸ್ತೂಲ್‌ ಕೆಳಗಿಟ್ಟು ಭಗವದ್ಗೀತೆ ಜತೆ ಗಾಂಧಿ ಪಥದತ್ತ ಬರಲಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಹೇಳಿದರು.

ಬಹುರೂಪಿ ನಾಟಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಗಾಂಧಿ ಪಥ‍’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಎಡ –ಬಲ ಪಂಥಗಳ ನಡುವಿನ ಚರ್ಚೆಯ ಬದಲು ಸುಳ್ಳು– ಸತ್ಯದ ನಡುವೆ, ಒಟ್ಟುಗೂಡಿಸುವ ಪಥ ಮತ್ತು ಒಡಕು ಉಂಟುಮಾಡುವ ಪಥಗಳ ನಡುವೆ ಚರ್ಚೆ ನಡೆಯಬೇಕಿದೆ ಎಂದು ವಸಂತಕುಮಾರ್ ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು