ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್; ಬಂಧನ

7

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್; ಬಂಧನ

Published:
Updated:

ಮೈಸೂರು: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಗೌಸಿಯಾನಗರದ ಸಮೀರ್ (28) ಎಂಬಾತನನ್ನು ಬಂಧಿಸಿರುವ ಅಪರಾಧ ಪತ್ತೆ ದಳ ಹಾಗೂ ಉದಯಗಿರಿ ಠಾಣೆ ಪೊಲಿಸರು 7 ಗ್ಯಾಸ್ ಸಿಲಿಂಡರ್ ಹಾಗೂ ₹ 3,410 ನಗದು ವಶಪಡಿಸಿಕೊಂಡಿದ್ದಾರೆ.

ಗೌಸಿಯಾನಗರದ ಮಹಮದೀಯ ರಸ್ತೆಯಲ್ಲಿ ಚಾವಣಿ ಇಲ್ಲದ ಶೆಡ್‍ನಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಆಹಾರ ಇಲಾಖೆಯ ಅಧಿಕಾರಿಗಳೂ ಇದ್ದರು. ಪ್ರಕರಣ ಉದಯಗಿರಿ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !