ಬುಧವಾರ, ನವೆಂಬರ್ 25, 2020
20 °C

ಮೈಸೂರಿನಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರ ಸೇರಿದಂತೆ ಕೆ.ಆರ್.ನಗರ, ನಂಜನಗೂಡು, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕುಗಳಲ್ಲಿ ಗುರುವಾರ ಉತ್ತಮ ಮಳೆ ಸುರಿದಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ಹಗುರ ಮಳೆಯಾಗಿದೆ.

ಮೈಸೂರು ತಾಲ್ಲೂಕಿನ ಬೀರಿಹುಂಡಿ ಹಾಗೂ ಹಿನಕಲ್‌ ಭಾಗಗಳಲ್ಲಿ 3 ಸೆ.ಮೀನಷ್ಟು ಮಳೆಯಾಗಿದೆ. ನಗರದಲ್ಲಿ ಒಂದೂವರೆ ಸೆಂ.ಮೀ, ಬೋಗಾದಿ, ವಾಜಮಂಗಳ, ಸಿದ್ಧಲಿಂಗಪುರ, ಮರಟಿಕ್ಯಾತನಹಳ್ಳಿಗಳ ವ್ಯಾಪ್ತಿಯಲ್ಲಿ 2 ಸೆಂ.ಮೀ ಮಳೆಯಾಗಿದೆ.

ನಂಜನಗೂಡು ತಾಲ್ಲೂಕಿನ ತಾಯೂರು ಹಾಗೂ ಚಿಕ್ಕಯ್ಯನಛತ್ರ ಭಾಗಗಳಲ್ಲಿ 3 ಸೆಂ.ಮೀ, ತಾಂಡವಪುರ, ಹುಳಿಮಾವು, ರಾಂಪುರ, ತುಂನೇರಳೆ, ಕುಡ್ಲಾಪುರ ಭಾಗಗಳಲ್ಲಿ 2 ಸೆಂ.ಮೀನಷ್ಟು ಆಗಿದೆ.

ತಿ.ನರಸೀಪುರ ತಾಲ್ಲೂಕಿನ ಬೆಳಕನಹಳ್ಳಿ, ದೊಡ್ಡೇಬಾಗಿಲು, ತಲಕಾಡು, ಹೊಳೆಸಾಲು, ಭೈರಾಪುರ, ಕಿರಗಸೂರು ವ್ಯಾಪ್ತಿಯಲ್ಲೂ ಮಳೆ ಸುರಿದಿದೆ.

ಎಚ್.ಡಿ.ಕೋಟೆ, ಹುಣಸೂರು ಹಾಗೂ ಕೆ.ಆರ್.ನಗರ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.