ವರುಣಾ: ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ಶಿಥಿಲಾವಸ್ಥೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಹಿರಿಯ ವಿದ್ಯಾರ್ಥಿಗಳು ದುರಸ್ತಿಗೊಳಿಸಲು ಮುಂದಾಗಿದ್ದಾರೆ.

ಹಿರಿಯ ವಿದ್ಯಾರ್ಥಿಗಳು ‘ನಮ್ಮ ಶಾಲೆ ನಮ್ಮ ಹೆಮ್ಮೆ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡು ಶಾಲೆಯ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ, ಗ್ರಾಮದ ಎಲ್ಲಾ ಮುಖಂಡರು, ಸಂಘ ಸಂಸ್ಥೆ, ಶಾಲೆಯ ಶಿಕ್ಷಕರ ಮತ್ತು ದಾನಿಗಳ ಸಹಯೋಗದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿದ್ದಾರೆ.

ಶಾಲಾ ಕಟ್ಟಡ ಚಾವಣಿ ದುರಸ್ತಿ, ಕಾಂಪೌಂಡ್‌ಗೆ ನೂತನ ಗೇಟ್ ಅಳವಡಿಕೆ, ಧ್ವಜ ಸ್ಥಂಭ ನಿರ್ಮಾಣ, ಉದ್ಯಾನಕ್ಕೆ ಅಲಂಕಾರಿಕ ಕೆಲಸಗಳು, ಉದ್ಯಾನ ನಿರ್ಮಾಣಕ್ಕೆ ಸಿದ್ಧತೆ, ಆಟದ ಮೈದಾನ ಅಭಿವೃದ್ಧಿ, ಶಾಲೆಗೆ
ವಿನೂತನ ಮಾದರಿಯಲ್ಲಿ ಬಣ್ಣ ಹಾಕುವುದು ಹಾಗೂ ಶಾಲೆಯ ಮುಂಭಾಗದ ಸ್ವಚ್ಛತೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ.

‘ಶಾಲೆಯ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಕಾಮಗಾರಿ ಚುರುಕುಗೊಳ್ಳಲು ದಾನಿಗಳಿಂದ ನೆರವು ನಿರೀಕ್ಷಿಸುತ್ತಿದ್ದೇವೆ’ ಎಂದು ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.