ಶುಕ್ರವಾರ, ಜನವರಿ 27, 2023
26 °C

ಇಂದು ಜನಸಂಪರ್ಕ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಡಿ. 8ರಂದು ಮಧ್ಯಾಹ್ನ 12ಕ್ಕೆ ಮೈಸೂರು ತಾಲ್ಲೂಕಿನ ಇಲವಾಲ ಗ್ರಾಮ ಪಂಚಾಯಿತಿ ಎದುರು ಕಂದಾಯ ಅದಾಲತ್, ಪಿಂಚಣಿ ಅದಾಲತ್ ಮತ್ತು ಜನಸಂಪರ್ಕ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ಕಂಚಲಗೂಡಿನಲ್ಲಿ ಕೆಎಚ್‌ಬಿ ವತಿಯಿಂದ ₹ 1.85 ಕೋಟಿ ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವರು. ಸಂಜೆ 4ಕ್ಕೆ ಧನಗಹಳ್ಳಿ ಗ್ರಾಮದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ₹ 2 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಚಾಲನೆ ನೀಡುವರು.

ಸಂಜೆ 5ಕ್ಕೆ ಮೂಗನಹುಂಡಿ ಗ್ರಾಮದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ₹ 50 ಲಕ್ಷ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಚಾಲನೆ ನೀಡುವರು. ಸಂಜೆ 5.30ಕ್ಕೆ ಕೇರ್ಗಳ್ಳಿ ಸರ್ವೇ ನಂ. 53ರ ಮಹಾಲಕ್ಷ್ಮಿ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಚಾಲನೆ ನೀಡುವರು.

ಆಂಜನೇಯಸ್ವಾಮಿ ಉತ್ಸವ: ಮದ್ಯ ಮಾರಾಟ ನಿಷೇಧ
ಮೈಸೂರು:
ಪಿರಿಯಾಪಟ್ಟಣದಲ್ಲಿ ಆಂಜನೇಯಸ್ವಾಮಿ ದೇವರ ಉತ್ಸವ ಮತ್ತು ಮೆರವಣಿಗೆಯು ಡಿ. 8ರಂದು ನಡೆಯಲಿದೆ. ಈ ಅಂಗವಾಗಿ ಡಿ. 7ರ ಸಂಜೆ 6ರಿಂದ ಡಿ. 8ರ ಸಂಜೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆದೇಶಿಸಿದ್ದಾರೆ.

ಸ್ವಚ್ಛತೆ ದೂರುಗಳಿಗೆ ಆಹ್ವಾನ
ಮೈಸೂರು:
ಬನ್ನೂರು ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಸ್ವಚ್ಛ ಸರ್ವೇಕ್ಷಣೆ-2019ರಲ್ಲಿ ಉತ್ತಮ ಶ್ರೇಯಾಂಕಗಳಿಸುವ ನಿಟ್ಟಿನಲ್ಲಿ ಸ್ವಚ್ಛತೆ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಾಗರಿಕರು ಸ್ವಚ್ಫತೆಗೆ ಸಂಬಂಧಿಸಿದ ದೂರುಗಳನ್ನು (ಚಿತ್ರ ಸಹಿತ) ಸಲ್ಲಿಸಲು ಪ್ಲೇ ಸ್ಟೋರ್‌ನಿಂದ ಸ್ವಚ್ಛತಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು  ದೂರು ಸಲ್ಲಿಸಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

10ರಂದು ವಿದ್ಯುತ್ ನಿಲುಗಡೆ
ಮೈಸೂರು:
‘ಸೆಸ್ಕ್‌’ ವತಿಯಿಂದ ರಾಜೀವ್‍ನಗರ ಮತ್ತು ದೇವನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣ, ಡಿ. 10ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವ್ಯಾಪ್ತಿಯ ರಾಜೀವ್‍ನಗರ 1, 2 ಮತ್ತು 3ನೇ ಹಂತ, ನಾರಾಯಣ ಹೃದಯಾಲಯ, ಶಾಂತಿ ನಗರ, ನೆಹರೂ ನಗರ, ರಾಧಾಕೃಷ್ಣ ನಗರ, ಭಾರತ್‍ ನಗರ, ಜೆ.ಎಸ್.ಎಸ್ ಬಡಾವಣೆ, ಶಕ್ತಿ ನಗರ, ಗೌಸಿಯಾ ನಗರ, ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭುಗತಗಳ್ಳಿ, ಮೇಳಾಪುರ, ರಮ್ಮನಹಳ್ಳಿ ವಾಟರ್‍ವಕ್ರ್ಸ್, ಕಾಳಸಿದ್ದನಹುಂಡಿ, ಸಾತಗಳ್ಳಿ, ರಮ್ಮನಹಳ್ಳಿ, ಸೂರ್ಯನಾರಾಯಣ ದೇವಸ್ಥಾನ, ಅಲ್ಬದರ್ ಮಸೀದಿ, ಕ್ರಿಶ್ಚಿಯನ್ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು