ಮೈಸೂರು: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ತಮ್ಮ ಕನಸಿನ ರಾಮರಾಜ್ಯವನ್ನು ಮೈಸೂರು ಸಂಸ್ಥಾನದಲ್ಲಿ ಕಂಡಿದ್ದರು’ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಶೇಖ್‌ಅಲಿ ಗುರುವಾರ ಇಲ್ಲಿ ತಿಳಿಸಿದರು.

ಜಯಚಾಮರಾಜ ಒಡೆಯರ್ ಜನ್ಮಶತಮಾನೋತ್ಸವದ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯ ಆಯೋಜಿರುವ ಮೂರು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ವಿಶೇಷ ಉಪನ್ಯಾಸದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಮೈಸೂರು ಅರಸರು ಜನರ ಹೃದಯದಲ್ಲಿ ಸ್ಥಾನ ಪಡೆದವರು’ ಎಂದು ಬಣ್ಣಿಸಿದರು.

‘ಎರಡನೇ ಮಹಾಯುದ್ಧ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮ ಉತ್ತುಂಗದಲ್ಲಿದ್ದ ಕಾಲ ಘಟ್ಟದಲ್ಲಿ ಜಯಚಾಮರಾಜ ಒಡೆಯರ್ ಮೈಸೂರು ಸಂಸ್ಥಾನದ ಅರಸರಾಗಿದ್ದರು. ತಮ್ಮ ಪೂರ್ವಿಕರು ಜಾರಿಗೊಳಿಸಿದ್ದ ಪ್ರಜಾಪ್ರಭುತ್ವದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು.’

‘ಸ್ವತಂತ್ರ ಭಾರತದ ಮರು ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಮಾನವೀಯತೆಯ ಪ್ರತೀಕವಾಗಿದ್ದರು. ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ತತ್ವಜ್ಞಾನಿ, ಚಿಂತಕರಾಗಿದ್ದ ಜಯಚಾಮರಾಜ ಒಡೆಯರ್ ಕವಿಯೂ ಆಗಿದ್ದರು. ತಮ್ಮ ಆಡಳಿತದಲ್ಲಿ ಸಾಹಿತ್ಯ, ಕಲೆಗೆ ಯಥೇಚ್ಛ ಪ್ರೋತ್ಸಾಹ ನೀಡಿದವರು’ ಎಂದು ಶೇಖ್ ಅಲಿ ಸ್ಮರಿಸಿಕೊಂಡರು.

ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಕುಲಸಚಿವ ಲಿಂಗರಾಜಗಾಂಧಿ, ಪ್ರೊ.ಸೆಬಾಸ್ಟಿಯನ್ ಜೋಸೆಫ್, ವೈ.ಎಚ್.ನಾಯಕವಾಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.