ಮೈಸೂರು: ‘ಗುರುವಾರ ಮಾತ್ರ ಅಲ್ಲ; ಇನ್ನೂ ಹಲವು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಅಲ್ಲಿಗೆ ಹೋಗದವರು ಅಧಿಕಾರ ಕಳೆದುಕೊಂಡಿಲ್ಲವೇ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು.
ಬುಧವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀರಾವರಿ ಸಚಿವನಾಗಿ ಚಾಮರಾಜಗರಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಮುಖ್ಯಮಂತ್ರಿಗೆ ಎಲ್ಲಾ ಜಿಲ್ಲೆಗಳು ಒಂದೇ. ಈ ಜಿಲ್ಲೆಗೆ ಹೋದರೆ ಹಲವಾರು ವಿಚಾರ ತಿಳಿದುಕೊಂಡು ಅಭಿವೃದ್ಧಿ ಮಾಡಬಹುದು. ನಂಜುಂಡಪ್ಪ ವರದಿ ಪ್ರಕಾರ ಕೆಲ ತಾಲ್ಲೂಕುಗಳು ಹಿಂದುಳಿದಿವೆ. ಅಂಥ ಪ್ರದೇಶಕ್ಕೆ ಹೋಗುವುದು ಮುಖ್ಯಮಂತ್ರಿಯ ಕರ್ತವ್ಯ. ನಂಬಿಕೆ, ಅಪನಂಬಿಕೆ ವ್ಯಕ್ತಿಗತವಾದುದು’ ಎಂದು ಹೇಳಿದರು.
‘ಅಶೋಕ್ ಬಂದ ಮೇಲೆ ನಮ್ಮದೇನಿದೆ?’
ಮೈಸೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗೆ ಮೊದಲೇ ಸುದ್ದಿಗಾರರೊಂದಿಗೆ ಮಳೆ, ರಸ್ತೆ ಗುಂಡಿ ವಿಚಾರವಾಗಿ ಮಾತನಾಡಲು ಕಂದಾಯ ಸಚಿವ ಆರ್.ಅಶೋಕ್ ಮುಂದಾದರು. ಆಗ ಅಲ್ಲಿಗೆ ಬಂದ ಬಸವರಾಜ ಬೊಮ್ಮಾಯಿ, ‘ಅಶೋಕ್ ಬಂದಮೇಲೆ ನಮ್ಮದೇನಿದೆ?’ ಎಂದು ಕಾಲೆಳೆದರು. ತಕ್ಷಣವೇ ಕಂದಾಯ ಸಚಿವರು ಹೊರಡಲು ಅನುವಾದರು. ಆಗ, ಮುಖ್ಯಮಂತ್ರಿ, ‘ಅಶೋಕ್ ಬನ್ನಿ ಬನ್ನಿ’ ಎಂದು ಕರೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.