ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.11ಕ್ಕೆ ಕೆ–ಸೆಟ್‌ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಅವಕಾಶ

ಇಂದಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ
Last Updated 7 ಫೆಬ್ರುವರಿ 2021, 12:11 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು (ಕೆ-ಸೆಟ್) ಏ.11ರಂದು ನಡೆಸುವುದಾಗಿ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದೆ.

ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ (http://kset.uni-mysore.ac.in) ಇದೇ 8ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಮಾರ್ಚ್‌ 7 ಅರ್ಜಿ ಸಲ್ಲಿಸಲು ಕೊನೆ ದಿನಾಂಕ. ₹ 250 ದಂಡದೊಂದಿಗೆ ಮಾರ್ಚ್ 13ರವರೆಗೂ ಅರ್ಜಿ ಸಲ್ಲಿಸಬಹುದು.

ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿರುವ ನೋಡೆಲ್‌ ಕೇಂದ್ರಗಳಲ್ಲಿ 41 ವಿಷಯದಲ್ಲಿ ಪರೀಕ್ಷೆ ನಡೆಯಲಿದೆ.

ಸಾಮಾನ್ಯ ವರ್ಗದವರಿಗೆ ₹ 1,150, ಪ್ರವರ್ಗ- 2 ಎ, 2 ಬಿ, 3 ಎ, 3 ಬಿ ವರ್ಗಕ್ಕೆ ₹ 950, ಎಸ್‌ಸಿ–ಎಸ್‌ಟಿ, ಪ್ರವರ್ಗ -1, ಅಂಗವಿಕಲರಿಗೆ ₹ 650 ಶುಲ್ಕ ನಿಗದಿಪಡಿಸಲಾಗಿದೆ.

ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಸ್ಟೇಟ್‌ಬ್ಯಾಂಕ್‌ನ ಎಂಒಪಿಎಸ್‌ ಮೂಲಕವೂ ನಗದು ಪಾವತಿಸಬಹುದು. ನೇರವಾಗಿ ನಗದನ್ನು ಪಾವತಿಸಲು ಚಲನ್ ಡೌನ್‌ಲೋಡ್ ಮಾಡಿಕೊಂಡು, ಯಾವುದೇ ಎಸ್‌ಬಿಐ ಶಾಖೆಗಳಲ್ಲಿ ತುಂಬಬೇಕು.

ಶುಲ್ಕ ಪಾವತಿಸಿದ ಎರಡು ದಿನದ ಬಳಿಕ ಅರ್ಜಿ ನಮೂನೆ, ಪ್ರವೇಶ ಪತ್ರ, ಹಾಜರಾತಿ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ತಮ್ಮಲ್ಲಿಯೇ ಇಟ್ಟುಕೊಂಡು, ಅರ್ಜಿಯ ಪ್ರತಿ ಮತ್ತು ಹಾಜರಾತಿ ಪ್ರತಿಗಳನ್ನು ಮಾತ್ರ ಎ 4 ಅಳತೆಯ ಲಕೋಟೆಯಲ್ಲಿ ‘ಕೆ–ಸೆಟ್ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2021’ ಎಂದು ನಮೂದಿಸಿ, ತಾವು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ನೋಡೆಲ್ ಅಧಿಕಾರಿಗೆ ಮಾ.15ರೊಳಗೆ ಸಲ್ಲಿಸಬೇಕು ಎಂದು ಕೆ-ಸೆಟ್ ಸಂಯೋಜನಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT