ಬುಧವಾರ, ಫೆಬ್ರವರಿ 19, 2020
27 °C

ಜೋಡಿಕಟ್ಟೆ ಮಹದೇಶ್ವರ ಜಾತ್ರೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಯಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಜೋಡಿಕಟ್ಟೆ ಮಲೆಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ರಾತ್ರಿ (ಫೆ.10) ನಡೆಯಲಿದ್ದು, ಮಂಗಳವಾರ (ಫೆ.11) ಸೂರ್ಯೋದಯಕ್ಕೂ ಮುಂಚೆ ಕೊಂಡೋತ್ಸವ ಜರುಗಲಿದೆ.

ಜಾತ್ರಾ ಮಹೋತ್ಸವವನ್ನು ಮಾವಿನಹಳ್ಳಿ, ಜಯಪುರ, ಬರಡನಪುರ ಗ್ರಾಮಸ್ಥರು ಒಟ್ಟಾಗಿ ಸೇರಿ ಆಚರಿಸುತ್ತಾರೆ.

ಸೋಮವಾರ ಬೆಳಿಗ್ಗೆ ಬರಡನಪುರ ಗ್ರಾಮದಿಂದ ಮಹದೇಶ್ವರ ಸ್ವಾಮಿಯ ‘ಹುಲಿ ವಾಹನ’ವನ್ನು ಜಯಪುರ ಜೋಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಬರಡನಪುರದಿಂದ ಬರುವಾಗ ದಾರಿಯುದ್ದಕ್ಕೂ ಭಕ್ತರು ಈಡುಗಾಯಿ ಒಡೆಯುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿನಿಯೋಗ ಮಾಡಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್ ನಾಗೇಶ್ ತಿಳಿಸಿದರು.

ಸೋಮವಾರ ರಾತ್ರಿ ಮಾವಿನಹಳ್ಳಿಯಿಂದ ಹಾಲರವಿ ಹೊರಡಲಿದೆ. ಬದನವಾಳು ಬಸವರಾಜ್ ಶಾಸ್ತ್ರಿಗಳ ನೇತೃತ್ವದಲ್ಲಿ ಮಹದೇಶ್ವರ ಸ್ವಾಮಿ ಕಥೆಯನ್ನು ಏರ್ಪಡಿಸಲಾಗಿದೆ.

ಮಂಗಳವಾರ ಮುಂಜಾನೆ ಕೊಂಡೋತ್ಸವ ಜರುಗಲಿದೆ. ನಂತರ ದೇವಾಲಯದ ಸುತ್ತ ಹುಲಿವಾಹನದೊಂದಿಗೆ ಪಂಜಿನ ಸೇವೆ ನಡೆಯಲಿದೆ. ಜೊತೆಗೆ ಜಾನುವಾರು ಪ್ರದಕ್ಷಿಣೆ ಹಾಕಿಸುವುದು ವಾಡಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು