ಶುಕ್ರವಾರ, ಫೆಬ್ರವರಿ 28, 2020
19 °C
ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿರುವ ಪೊಲೀಸರು

‘ಫೇಸ್‌ಬುಕ್‌’ ಖಾತೆಯಲ್ಲಿ ಅಶ್ಲೀಲ ವಿಡಿಯೊ; ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಫೇಸ್‌ಬುಕ್‌’ ಖಾತೆಯಲ್ಲಿ ಬಾಲಕನೊಬ್ಬನ ಅಶ್ಲೀಲ ವಿಡಿಯೊ ಹಾಗೂ ಪುರುಷರ ನಡುವಿನ ಲೈಂಗಿಕ ಕ್ರಿಯೆಯ ವಿಡಿಯೊವನ್ನು ‘ಅಪ್‌ಲೋಡ್‌’ ಮಾಡಿದ್ದ ಇಲ್ಲಿನ ಜೆ.ಸಿ.ನಗರದ ನಿವಾಸಿ ಎಸ್.ದಿಲೀಪ್‌ಕುಮಾರ್ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ‘ಫೇಸ್‌ಬುಕ್‌’ನಲ್ಲಿ ವಿಡಿಯೊ ‘ಅಪ್‌ಲೋಡ್‌’ ಮಾಡಿರುವ ಕುರಿತು ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳ ತಡೆ ಹಾಗೂ ರಾಷ್ಟ್ರೀಯ ಸೈಬರ್ ಪೊರ್ಟಲ್‌ಗಳಲ್ಲಿ ದೂರು ದಾಖಲಾಗಿತ್ತು.

ಈ ದೂರನ್ನು ಆಧರಿಸಿ ನಗರದ ಸೈಬರ್ ಠಾಣೆಯ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಕೇಂದ್ರ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್‌ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಸಿಸಿಪಿಡಬ್ಲೂಸಿ, ಎನ್‌ಸಿಸಿಆರ್‌ಪಿ, ಎನ್‌ಸಿಎಂಇಸಿ ‘ವೆಬ್‌ಪೋರ್ಟಲ್‌’ಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ‘ಸೈಬರ್ ಟಿಪ್‌ಲೈನ್‌’ ಮೂಲಕ ದೂರು ಬರುತ್ತದೆ. ಇದನ್ನು ಆಧರಿಸಿ ಲೈಂಗಿಕ ವಿಡಿಯೊ ಅಪ್‌ಲೋಡ್‌ ಮಾಡಿದವರನ್ನು ಬಂಧಿಸಲಾಗುತ್ತದೆ. ಹಾಗಾಗಿ, ಯಾರೂ ಇಂತಹ ಕೃತ್ಯಕ್ಕೆ ಕೈ ಹಾಕಬಾರದು ಎಂದು ಪೊಲೀಸರು ತಿಳಿಸಿದ್ದಾರೆ. ‌

ಈ ಕಾರ್ಯಚರಣೆಯಲ್ಲಿ ಸೈಬರ್ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್‌ ಎನ್.ಜಿ.ಕೃಷ್ಣಪ್ಪ, ಎಎಸ್‌ಐ ಕೆ.ಜಿ.ನಿರಂಜನ್, ಸಿಬ್ಬಂದಿಯಾದ ಎಂ.ಶಿವಶಂಕರ್, ಎಸ್.ರವಿಕುಮಾರ್, ವಿ.ಎ.ಮಧು, ಎಂ.ಬಿ.ನಾಗರಾಜ, ನಂಜುಂಡ, ಶಿವಕುಮಾರ್, ಎಸ್.ಎಂ.ವೀಣಾ, ಎಸ್.ನಾಗರತ್ನಾ ಕಾರ್ಯಾಚರಣೆ ತಂಡದಲ್ಲಿದ್ದರು.

ದ್ವಿಚಕ್ರ ವಾಹನ ಕಳ್ಳನ ಬಂಧನ

ಮೈಸೂರು: ಉದಯಗಿರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಕಳ್ಳತನದ ಆರೋಪಿ ಕ್ಯಾತಮಾರನಹಳ್ಳಿ ನಿವಾಸಿ ಕಿರಣ್ (26) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ₹2.67 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈತ ರಾಜಕುಮಾರ್ ರಸ್ತೆಯ ತ್ರಿವೇಣಿ ವೃತ್ತ ಬಳಿ ನಂಬರ್‌ ಪ್ಲೇಟ್‌ ಇಲ್ಲದ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಉದಯಗಿರಿ ಠಾಣೆಯ ಇನ್‌ಸ್ಪೆಕ್ಟರ್ ಎನ್.ಎಂ.ಪೂಣಚ್ಚ, ಪಿಎಸ್‌ಐ ಜೈಕೀರ್ತಿ, ಸಿಬ್ಬಂದಿಯಾದ ಬಾಬು, ಮಂಜುನಾಥ್, ಮೋಹನ್‌ಕುಮಾರ್, ಕೃಷ್ಣ, ನಂದಿನಿ, ಭವ್ಯಾ ಕಾರ್ಯಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು