ಶುಕ್ರವಾರ, ಆಗಸ್ಟ್ 12, 2022
20 °C

ಬಾಲನ್ಯಾಯ ಮಂಡಳಿಯ ಸದಸ್ಯತ್ವ: ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: 2020ರಿಂದ 2023ರವರೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು, ಸದಸ್ಯರು ಹಾಗೂ ಬಾಲನ್ಯಾಯ ಮಂಡಳಿಯ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಸಿಡಬ್ಲ್ಯೂಸಿ ಹಾಗೂ ಜೆಜೆಬಿಗಳಿಗೆ ಪ್ರತ್ಯೇಕ ಅರ್ಜಿ ನಮೂನೆಗಳು (ಅರ್ಜಿಯು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿದೆ), ಸೂಚನೆಗಳು, ಅಫಿಡವಿಟ್‍ಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶನಾಲಯದ ವೆಬ್‍ಸೈಟ್ www.icps.karnataka.gov.in ನಲ್ಲಿ ಲಭ್ಯವಿವೆ.

ಅರ್ಜಿದಾರರು ಸಿಡಬ್ಲ್ಯೂಸಿ ಅಥವಾ ಜೆಜೆಬಿ ಎರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಸದರಿ ಅರ್ಜಿಯನ್ನು ಮಾತ್ರ ದ್ವಿಪ್ರತಿಯಲ್ಲಿ ಸಲ್ಲಿಸುವುದು.

ಒಂದು ವೇಳೆ ಅರ್ಜಿದಾರರು ಸಿಡಬ್ಲ್ಯೂಸಿ ಹಾಗೂ ಜೆಜೆಬಿ ಎರಡಕ್ಕೂ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ, ಭರ್ತಿ ಮಾಡಿದ ಪ್ರತ್ಯೇಕ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ರಿಜಿಸ್ಟರ್ಡ್ ಅಂಚೆ ಮೂಲಕ (ಆರ್.ಪಿ.ಎ.ಡಿ) ಅಥವಾ ಖುದ್ದಾಗಿ ನ.15ರೊಳಗೆ ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ನಿರ್ದೇಶನಾಲಯ, ಬಹುಮಹಡಿಗಳ ಕಟ್ಟಡ, ಡಾ.ಬಿ.ಆರ್ ಅಂಬೇಡ್ಕರ್ ಬೀದಿ, ಬೆಂಗಳೂರು-560001 ಇವರಿಗೆ ಸಲ್ಲಿಸಬಹುದು.

ಮಾಹಿತಿಗಾಗಿ 080-22879382/83, 0821-2543003 ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಡಾ.ಎಸ್.ದಿವಾಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.