ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡರಿಗೆ ಬಿಸಿ ಮುಟ್ಟಿಸಿದ ಮೇಟಗಳ್ಳಿ ಪೊಲೀಸರು

ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಯುವಕನ ಬಂಧನ
Last Updated 19 ಆಗಸ್ಟ್ 2019, 20:24 IST
ಅಕ್ಷರ ಗಾತ್ರ

ಮೈಸೂರು/ಹುಣಸೂರು: ಹೆಚ್ಚುತ್ತಿರುವ ಪುಂಡರ ಉಪಟಳವನ್ನು ಅಡಗಿಸುವ ಪ್ರಯತ್ನಗಳನ್ನು ಮೇಟಗಳ್ಳಿ ಹಾಗೂ ಹುಣಸೂರು ಪಟ್ಟಣ ಪೊಲೀಸರು ಮಾಡಿದ್ದಾರೆ.

ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಯುವಕನೊಬ್ಬನನ್ನು ಮೇಟಗಳ್ಳಿ ಠಾಣಾ ಪೊಲೀಸರು ಬಂಧಿಸಿದ್ದರೆ, ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದ 15 ಮಂದಿಯನ್ನು ಹುಣಸೂರು ಪಟ್ಟಣ ಪೊಲೀಸರು ಬಂಧಿಸಿ, ಜೈಲಿಗಟ್ಟುವ ಮೂಲಕ ಪುಂಡರಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಘಟನೆಗಳ ವಿವರ:

ಮೈಸೂರು ಹೊರವಲಯದ ಮೇಟಗಳ್ಳಿಯಲ್ಲಿ ಭಾನುವಾರ ರಾತ್ರಿ ಹೆಡ್‌ಕಾನ್‌ಸ್ಟೆಬಲ್ ಸಲೀಂ ಪಾಷಾ ಹಾಗೂ ಕಾನ್‌ಸ್ಟೆಬಲ್ ಅಶೋಕಕುಮಾರ್ ಅವರು ಗಸ್ತಿನಲ್ಲಿದ್ದಾಗ ಹೆಬ್ಬಾಳು ಮುಖ್ಯರಸ್ತೆಯ ಕೇರಳಾಪುರದ ಮಿಲ್ಟ್ರಿ ಹೋಟೆಲ್ ಮುಂದೆ 4ರಿಂದ 5 ಮಂದಿ ಜೋರಾಗಿ ಮಾತನಾಡುತ್ತಾ ಗದ್ದಲ ಉಂಟು ಮಾಡುತ್ತಿದ್ದರು. ‘ಹೀಗೆ ಮಾಡಬೇಡಿ’ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದರಿಂದ ಕೆರಳಿದ ವಿಕಾಸ್ ಅಲಿಯಾಸ್ ವಿಕ್ಕಿ ಎಂಬಾತ ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿ ಕಾನ್‌ಸ್ಟೆಬಲ್ ಅಶೋಕಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ. ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಣಸೂರು ವರದಿ:

ಹುಣಸೂರು ಪಟ್ಟಣದ ಸ್ಟೋರ್ ಬೀದಿಯ ಕಾಫಿ ಬೋರ್ಡ್‌ನ ಮುಂದೆ 10ರಿಂದ 12 ಮಂದಿ ಭಾನುವಾರ ರಾತ್ರಿ ಗಲಾಟೆ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇವರನ್ನು ಎಎಸ್‌ಐ ಪುಟ್ಟರಾಜು ಅವರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ನಗರದಲ್ಲಿ ಹಾಡಹಗಲೇ ಕಳ್ಳತನ

ಮೈಸೂರು: ಇಲ್ಲಿನ ಹೊರವಲಯದ ರೂಪಾನಗರ– ದಾಸನಕೊಪ್ಪಲುವಿನ ನಿವಾಸಿ ಅಶೋಕ ಚಿಟಗುಪ್ಪಿ ಅವರ ಮನೆಯನ್ನು ಹಾಡಹಗಲೇ ಕಳ್ಳರು ಕಳ್ಳತನ ಮಾಡಿದ್ದಾರೆ.

ಇವರು ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿಕೊಂಡು ಜೆ.ಪಿ.ನಗರದ ವಿಠಲ ಧಾಮದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಗಾಗಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ತೆರಳಿದ್ದರು. ರಾತ್ರಿ 8 ಗಂಟೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.

ಕಳ್ಳರು ಕಿಟಕಿಯ ಸರಳುಗಳನ್ನು ಮುರಿಯುವ ಮೂಲಕ ಒಳಪ್ರವೇಶಿಸಿದ್ದಾರೆ. 104 ಗ್ರಾಂ ಚಿನ್ನ ಕಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT