ಶುಕ್ರವಾರ, ನವೆಂಬರ್ 27, 2020
18 °C

ಡಿ.ಕೆ.ಶಿವಕುಮಾರ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಎಸ್.ಟಿ.ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಅವರ ಮಾತನ್ನು ಸಿದ್ದರಾಮಯ್ಯನೇ ಕೇಳಲ್ಲ. ಅವರ ಮಾತಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ನಾನು, ಮುನ್ನಿರತ್ನ, ಭೈರತಿ ನಿಷ್ಠಾವಂತ ಕಾರ್ಯಕರ್ತರು. ನಾವು ಪಕ್ಷ ತೊರೆಯುವಾಗ ಇವರೆಲ್ಲಾ ಎಲ್ಲಿ ಹೋಗಿದ್ರು. ಆಗ ಎಲ್ಲಾ ವಿಚಾರವನ್ನು ನಾವು ಇವರಿಗೆ ತಿಳಿಸಿರಲಿಲ್ವಾ’ ಎಂದು ಕಿಡಿಕಾರಿದರು.

ಆರ್.ಆರ್. ನಗರದಲ್ಲಿ ಕಾಂಗ್ರೆಸ್‌ಗೆ ಕಾರ್ಯಕರ್ತರಿಲ್ಲ. ಎಲ್ಲರೂ ಮುನ್ನಿರತ್ನ ಹಿಂದೆ ಬಂದಿದ್ದಾರೆ. ಕಾಂಗ್ರೆಸ್ ಹೊರಗಿನಿಂದ ಜನರನ್ನು ಕರೆ ತಂದು ಬಿತ್ತಿ ಪತ್ರ ಹಂಚಿಸುತ್ತಿದ್ದಾರೆ. ಇದನ್ನೇ ನಮ್ಮ ಅಭ್ಯರ್ಥಿ ಭಯದ ವಾತಾವರಣ ಎಂದು ಹೇಳಿರುವುದು ಎಂದರು.

ಮುನ್ನಿರತ್ನ ಕಳೆದ 6 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ಹೀಗಾಗಿ ನಮ್ಮ ಅಭ್ಯರ್ಥಿ ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾ ಮಳೆಗೆ ಬೆಂಗಳೂರು ತತ್ತರಿಸಿದೆ. ರಾಜಕಾಲುವೆಗಳ ಒತ್ತುವರಿ ತೆರವು ಶೇ.60ರಷ್ಟು ಆಗಿದೆ. ಇನ್ನೂ 40 ರಷ್ಟು ತೆರವು ಮಾಡಲು ಕೋರ್ಟ್ ಕೇಸ್‌ಗಳು ಅಡ್ಡಿಯಾಗಿವೆ. ಸಿಎಂ ಆದಷ್ಟು ಬೇಗ ತೆರವು ಮಾಡುವುದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

‘ಸರ್ಕಾರದ ವತಿಯಿಂದ ಮಳೆಯಿಂದ ತೊಂದರೆಯಾದವರಿಗೆ ₹ 25 ಸಾವಿರ ಹಣವನ್ನು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ಬಂದ ಮಳೆ ಬಹಳ ದೊಡ್ಡ ಮಳೆ. ಅದರ ಅನಾಹುತಕ್ಕೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಪರಿಹಾರ ಕಾರ್ಯಗಳು ಸಮಾರೋಪಾದಿಯಲ್ಲಿ ನಡೆಯುತ್ತಿವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು