ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಶಿಕ್ಷಕರಿಂದ ವಿದ್ಯಾಸಂಸ್ಥೆಯ ಟ್ರಸ್ಟಿ ಕೊಲೆ

Last Updated 28 ಅಕ್ಟೋಬರ್ 2020, 11:31 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಟ್ರಸ್ಟಿ ಪರಶಿವಮೂರ್ತಿ (67) ಅವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಶಾಲೆಯ ಮುಖ್ಯಶಿಕ್ಷಕ ಹಾಗೂ ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಟ್ಟು ಮೂವರು ಶಿಕ್ಷಕರು.

ನಾಗೇಶ್ (37), ನಿರಂಜನ್ (22), ವಿಶ್ವನಾಥಭಟ್ (52), ಪರಶಿವ (55), ಸಿದ್ದರಾಜು (54) ಬಂಧಿತರು.

ಘಟನೆ ವಿವರ:

‘ಅನುದಾನಿತ ಶಿಕ್ಷಣ ಸಂಸ್ಥೆಯಾದ ವಿಶ್ವಚೇತನ ಸಂಸ್ಕೃತ ಪಾಠಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರನ್ನೂ ಟ್ರಸ್ಟಿ ಪರಶಿವಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಪ್ರತಿಯೊಬ್ಬರ ಸಂಬಳದಿಂದ ಇವರು ಪ್ರತಿ ತಿಂಗಳು ಹಣ ಪಡೆಯುತ್ತಿದ್ದರು. ಇವರ ಕಿರುಕುಳಕ್ಕೆ ಬೇಸತ್ತ ಶಾಲೆಯ ಮುಖ್ಯಶಿಕ್ಷಕ ವಿಶ್ವನಾಥ್ ಭಟ್, ಸಹಶಿಕ್ಷಕ ಪರಶಿವ ಹಾಗೂ ಇವರ ಸ್ನೇಹಿತ ಮಡಿವಾಳಸ್ವಾಮಿ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಸಿದ್ಧರಾಜು ಕೊಲೆ ಮಾಡಲು ಸಂಚು ರೂಪಿಸಿದರು. ನಾಗೇಶ್ ಎಂಬಾತನಿಗೆ ₹ 7 ಲಕ್ಷ ಹಾಗೂ ಶಿಕ್ಷಕ ಹುದ್ದೆಯ ಆಮಿಷ ಒಡ್ಡಿ ಸುಪಾರಿ ನೀಡಿದ್ದಾರೆ. ನಾಗೇಶ್ ತನ್ನ ಗೆಳೆಯ ನಿರಂಜನ್ ಜತೆ ಸೇರಿ ಸೆ. 20ರ ರಾತ್ರಿ ಪರಶಿವಮೂರ್ತಿ ಅವರ ನಿವಾಸಕ್ಕೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದರು’ ಎಂದು ಡಿಸಿಪಿ ಪ್ರಕಾಶ್‌ಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT