ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಯುವಕನಿಗೆ ಕೃತಕ ಕಾಲು ಜೋಡಣೆ

Last Updated 4 ಆಗಸ್ಟ್ 2022, 11:22 IST
ಅಕ್ಷರ ಗಾತ್ರ

ಮೈಸೂರು: ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ಗೋಲ್ಡನ್‌ ಸಿಟಿ ವತಿಯಿಂದ ನಗರದ ಗಾಯತ್ರಿಪುರಂನ ಆದರ್ಶ (18) ಎನ್ನುವವರಿಗೆ ಲಯನ್ಸ್‌ ಎಂ.ಸಿ.ಬನ್ಸಾಲಿ ಸಹಯೋಗದಲ್ಲಿ ಕೃತಕ ಕಾಲು (ಬಲ) ಜೋಡಿಸಿಕೊಡಲಾಗಿದೆ.

‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಣ್ಯಸ್ಮರಣೆ ಅಂಗವಾಗಿ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಅವರ ಎಡಗಾಲಿನ ಶಸ್ತ್ರಚಿಕಿತ್ಸೆಯನ್ನೂ ಕ್ಲಬ್‌ ವತಿಯಿಂದಲೇ ಮಾಡಿಸಿಕೊಡಲಾಗುವುದು’ ಎಂದು ಕ್ಲಬ್‌ನ ಕಾರ್ಯದರ್ಶಿ ಪ್ರೇಮಲೀಲಾ ಎಸ್. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ಆ ವ್ಯಕ್ತಿಯು 4 ವರ್ಷದಿಂದ ಅಂಗವೈಕಲ್ಯದಿಂದ ಬಳಲುತ್ತಿದ್ದರು. ಅವರ ಪೋಷಕರು ಆರ್ಥಿಕವಾಗಿ ಸದೃಢರಾಗಿಲ್ಲದ ಕಾರಣ ಕೃತಕ ಕಾಲು ಜೋಡಣೆ ಸಾಧ್ಯವಾಗಿರಲಿಲ್ಲ. ನಮ್ಮ ಸಂರ್ಪಕಕ್ಕೆ ಬಂದ ಅವರಿಗೆ ವೈದ್ಯರ ಸಲಹೆ ಮೇರೆಗೆ ನೆರವು ನೀಡಲಾಗಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಯಾರಿಗಾದರೂ ಕೃತಕ ಕಾಲು ಅಥವಾ ಕೈ ಅವಶ್ಯಕತೆ ಇದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಹಾಕಿಸಿಕೊಡಲಾಗುವುದು. 9886166243 ಸಂಪರ್ಕಿಸಬಹುದು’ ಎಂದು ಮಾಹಿತಿ ನೀಡಿದರು.

ಭೂಸೇನೆಯ ನಿವೃತ್ತ ಜೂನಿಯರ್‌ ಕಮಿಷನ್‌ ಅಧಿಕಾರಿ ರಘುಕುಮಾರ್, ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ಗೋಲ್ಡನ್‌ ಸಿಟಿ ಅಧ್ಯಕ್ಷ ಟಿ.ಸುರೇಶ್, ಪರಿಸರವಾದಿ ಭಾನು ಮೋಹನ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಗಂಗಾಧರ್, ಸಮಾಜ ಸೇವಕರಾದ ಗಾಯತ್ರಿ ಪಾಂಡುಜಿ, ರಾಜಶೇಖರ್, ಜೆ.ಆಶಾ ಮಂಜುನಾಥ್, ಉಮಾಶಂಕರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT