ಮೈಸೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ತಾಲ್ಲೂಕಿನ ಸೋಮನಹಳ್ಳಿಯ ದರ್ಶನ್ (24) ಅವರ ಅಂಗಾಂಗಗಳನ್ನು ಕುಟುಂಬದವರು ದಾನ ಮಾಡಿ ಇತರರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ.

ಅವರ ಹೃದಯವನ್ನು ಶುಕ್ರವಾರ ಮೈಸೂರಿನಿಂದ ವಿಮಾನದಲ್ಲಿ ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಗೆ ಸಾಗಿಸಲಾಯಿತು. ಹೃದಯ ಹೊತ್ತ ಆಂಬುಲೆನ್ಸ್ ಅಪೋಲೊ–ಬಿಜಿಎಸ್ ಆಸ್ಪತ್ರೆಯಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ‘ಗ್ರೀನ್ ಕಾರಿಡಾರ್’ (ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ) ನಿರ್ಮಿಸಲಾಗಿತ್ತು.

ಒಂದು ಕಿಡ್ನಿಯನ್ನು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೊಂದು ಕಿಡ್ನಿ ಮತ್ತು ಯಕೃತ್ ಅನ್ನು ಅಪೋಲೊ–ಬಿಜಿಎಸ್ ಆಸ್ಪತ್ರೆಯಲ್ಲೇ ರೋಗಿಗಳಿಗೆ ಕಸಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.